ಸೋಂಕು ನಿಯಂತ್ರಣ ನಿಯಮಗಳ ಸರಿಯಾದ ಪಾಲನೆಯಾಗುವಂತೆ ಅಧಿಕಾರಿಗಳು ನಿಗಾವಹಿಸಿ ಃ ಸಚಿವ ಸಿ.ಸಿ.ಪಾಟೀಲ


ಗದಗ, ಮೇ.4 : ಕೋವಿಡ್-19 ಎರಡನೇ ಅಲೆ ಅತ್ಯಂತ ಭೀಕರತೆಯಿಂದ ಮುನ್ನುಗ್ಗುತ್ತಿದ್ದು ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಮಾರ್ಗಸೂಚಿಸಗಳನ್ನು ಜಾರಿಗೊಳಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿ ಸಿಬ್ಬಂದಿಗಳು ನಿಗಾ ವಹಿಸುವಂತೆ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಗದಗ ಜಿಲ್ಲಾಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.
ಗದಗ ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ಜರುಗಿದ ಕೋವಿಡ್-19 ರೋಗದ ಸ್ಥಿತಿಗತಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ವರಿಷ್ಠ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಮಾಸ್ಕ ಧಾರಣೆ ಸಂಬಂಧಿಸಿದಂತೆ ಸಾರ್ವಜನಿಕರು ನಿಷ್ಕಾಳಜಿ ತೋರುತ್ತಿದ್ದು ಈ ಕುರಿತು ಜನ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಹಾಗೂ ಮಾಸ್ಕ ಧರಿಸಲು ಪ್ರೇರೆಪಿಸಿ ತೀರಾ ಅಗತ್ಯವಿದ್ದಲ್ಲಿ ಮಾತ್ರ ಜನ ಮನೆಯಿಂದ ಹೊರ ಬರುವಂತೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಸರ್ಕಾರದ ಮಾರ್ಗಸೂಚಿಗಳ ಪಾಲನೆಯಲ್ಲಿ ಜಿಲ್ಲಾ ಪೆÇೀಲಿಸ್ ಇಲಾಖೆ ಸಾಕಷ್ಟು ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇವುಗಳ ಪಾಲನೆಯಲ್ಲಿ ಇನ್ನೂ ಹೆಚ್ಚಿನ ಕಾರ್ಯವಾಗುವಂತೆ ಸಚಿವರು ಅಪೇಕ್ಷೆ ವ್ಯಕ್ತಪಡಿಸಿದರು. ಅದರಂತೆ ಜಿಲ್ಲೆಯ ವೈದ್ಯಕೀಯ ಸಿಬ್ಬಂದಿಗಳು ಸಾಕಷ್ಟು ಒತ್ತಡದಲ್ಲಿ ಕಾರ್ಯ ನಿರ್ವಹಿಸಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸುತ್ತಿರುವದು ಶ್ಲಾಘನೀಯವಾಗಿದೆ. ವೈದ್ಯ ದೇವೋ ಭವ ಎಂಬ ನಾಣ್ಣುಡಿಯಂತೆ ಆಸ್ಪತ್ರೆಗೆ ದಾಖಲಾಗುವ ಸೋಂಕಿತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ಒದಗಿಸುವಂತೆ ತಿಳಿಸಿದರು.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿÀ?ದರೆ ಗದಗ ಜಿಲ್ಲೆಯ ಸ್ಥಿತಿ ಸಮಾಧಾನಕರವಾಗಿದ್ದು ಆದರೂ ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಚು ಪ್ರಕರಣಗಳು ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಂಡು ಬಂದಿರುತ್ತವೆ. ಇದನ್ನು ನಿಯಂತ್ರಿಸಲು ಪೆÇೀಲಿಸ್ ಹಾಗೂ ಇತರೆ ಇಲಾಖೆ ಸಿಬ್ಬಂದಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು. ತದನಂತರ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸಲಹೆ ಸೂಚನೆ ಆಲಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಈರಣ್ಣ ನಾಡಗೌಡ್ರ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಬರಬಹುದಾದಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಈಗಿನಿಂದಲೆ ಅಗತ್ಯದ ಮುಂಜಾಗ್ರತಾ ಕ್ರಮಗಳನ್ನು ವಹಿಸಿಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಸೋಂಕು ಧೃಡಪಟ್ಟಂತಹ ಗ್ರಾಮೀಣ ಜನರಿಗೆ ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು ನಿಷ್ಕಾಳಜಿ ತೋರೆದೆ ಚಿಕಿತ್ಸೆ ಒದಗಿಸಲು, ಹಾಗೂ ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಇದು ಸಾಮಾನ್ಯ ಜ್ವರ ಅಥವಾ ಸೋಂಕಿಗೆ ಒಳಗಾಗಿರುವದೆ ಎಂಬುದನ್ನು ಗುರಿತಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದರು.
ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಮಾತಾನಾಡಿ ಸೋಂಕು ಪರೀಕ್ಷಾ ವರದಿ ಬರಲು ವಿಳಂಭವಾಗುತ್ತಿದ್ದು ಪರೀಕ್ಷಾ ವರದಿಯು ಶೀಘ್ರವೆ ದೊರೆಯುವಂತಾಗಬೇಕು. ಹೊರ ರಾಜ್ಯ ಜಿಲ್ಲೆಗಳಿಂದ ಆಗಮಿಸಿದ ವಲಸಿಗರ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಪರೀಕ್ಷೆಗೊಳಪಡಿಸಿ ಕಡ್ಡಾಯವಾಗಿ ಹೋಮ ಐಸೋಲೆಷನಲ್ಲಿರುವಂತೆ ನಿಗಾವಹಿಸಬೆಕು. ಜಿಮ್ಸ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಹಾಗೂ ಅಗತ್ಯದ ರೆಮಿಡಿಸಿವರ ಲಸಿಕೆ ಪೂರೈಸುವಂತೆ ಹಾಗೂ ವೈದ್ಯರ ಕೊರತೆ ವಿಷಯ ಪ್ರಸ್ತಾಪಿಸಿದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃಧ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದನ್ವಯ ಮೀಸಲಿಡಲಾದ ಹಾಸಿಗೆಗೆಳ ವಿವರ ಪಡೆದ ಅವರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.
ಶಾಸಕ ಡಾ.ಎಚ್.ಕೆ.ಪಾಟೀಲ ಮಾತನಾಡಿ ರಾಷ್ಟ್ರಾದ್ಯಂತ ಆಕ್ಸಿಜನ್ ಕೊರತೆ ಉಂಟಾಗಿದ್ದು ಅಂತಹ ಪರಿಸ್ಥಿತಿ ಜಿಲ್ಲೆಗೂ ಬರಬಹುದಾಗಿದ್ದು ಇದರ ಕುರಿತು ಈಗಿನಿಂದಲೇ ಅಗತ್ಯದ ವ್ಯವಸ್ಥೆ ಮಾಡಿಟ್ಟುಕೊಳ್ಳುವಂತೆ ತಿಳಿಸಿದರು. ಕಳೆದ ವರ್ಷದ ಅಲೆಯಲ್ಲಿ ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸಿರುತ್ತದೆ. ಅಕ್ಟೋಬರ ಒಳಗಾಗಿ ಜಿಲ್ಲೆಯ ಅರ್ಹ ಪ್ರತಿಯೊಬ್ಬರಿಗೂ ಮೊದಲ ಹಾಗೂ ಎರಡನೇ ಹಂತದ ಲಸಿಕೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು. ಜಿಮ್ಸನಲ್ಲಿ 200 ಹೆಚ್ಚುವರಿ ಆಕ್ಸಿಜನ್ ಬೆಡ ವ್ಯವಸ್ಥೆಗೆ ಕ್ರಮ ವಹಿಸಬೇಕು. ರೈಲ್ವೇ ಇಲಾಖೆಯಿಂದ ಸೋಂಕಿತರ ಚಿಕಿತ್ಸೆಗೆ ನಿರ್ಮಿಸಲಾದ ಕನಿಷ್ಠ ನಾಲ್ಕು ಕೋಚಗಳನ್ನು ಪಡೆಯಲು ಸಲಹೆ ನೀಡಿದರು. ಜಿಮ್ಸ ಆವರಣದಲ್ಲಿ 13 ಕೆ.ಎಲ್. ಸಾಮಥ್ರ್ಯದ ಆಕ್ಸಿಜನ್ ಸಂಗ್ರಹಣಾ ಘಟಕವಿದ್ದು ಅಂತಹ ಇನ್ನೊಂದು ಘಟಕ ಸ್ಥಾಪಿಸಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ ಜಿಮ್ಸ ಲ್ಯಾಬರೋಟರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟ ಕಾರಣ ವರದಿ ನೀಡಲು ವಿಳಂಭವಾಗುತ್ತಿದೆ. ಅಲ್ಲದೇ ಹೆಚ್ಚಿನ ಪರೀಕ್ಷೆಗೆ ಅನುಕೂಲವಾಗುವಂತೆ ಹೊಸ ಯಂತ್ರ ಬಂದಿದ್ದು ಶೀರ್ಘವೇ ಇದು ಕಾರ್ಯಾರಂಭಿಸಿ ಇಪ್ಪನಾಲ್ಕು ಘಂಟೆಯೊಳಗೆ ವರದಿ ನೀಡಲು ಕ್ರಮ ಜರುಗಿಸಲಾಗುವದು ಹಾಗೂ ಯಾವುದೇ ವೈದ್ಯರು ಕಾರ್ಯನಿರ್ವಹಿಸಲು ಮುಂದೆ ಬಂದಲ್ಲಿ ಅಂತಹವರಿಗೆ ಅರ್ಧ ಘಂಟೆಯೊಳಗಾಗಿ ಆದೇಶ ಪ್ರತಿ ನೀಡಲಾಗುವದು ಎಂದರು.
ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಆಲಿಸಿದ ಸಚಿವರು, ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ 180 ಹಾಸಿಗೆಗಳು ಲಭ್ಯವಿದ್ದು ಆಯಾ ಭಾಗದ ರೋಗ ಲಕ್ಷಣಗಳಿರದ ಸೋಂಕಿತರನ್ನು ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಒದಗಿಸಲು ಕ್ರಮ ಜರುಗಿಸಲು ಸೂಚಿಸಿಲಾಗಿರುತ್ತದೆ. ಜಂಬೋ ಆಕ್ಸಿಜನ್ ಟ್ಯಾಂಕಗಳ ಖರೀದಿ ಕುರಿತು ಜಿಲ್ಲಾಡಳತವು ನಿರಂತರವಾಗಿ ಪ್ರಯತ್ನಿಸುತ್ತಿದ್ದು ಅನುದಾನಕ್ಕೆ ಕೊರತೆ ಇರುವುದಿಲ್ಲ ಈ ಕುರಿತು ಕೂಡಲೇ ಕ್ರಮ ಜರುಗಿಸಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಜಿಮ್ಸನಲ್ಲಿರುವ ನಿಯಮಿತವಾಗಿ ಆಕ್ಸಿಜನ್ ಸರಬರಾಜು ಆಗುವಂತೆ ನಿಗಾವಹಿಸಲು ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲು ಸಚಿವ ಸಿ.ಸಿ.ಪಾಟೀಲ ಸೂಚನೆ ನೀಡಿದರು.
ಸಂಸದರಾದ ಶಿವಕುಮಾರ ಉದಾಸಿ ಶಾಸಕ ರಾಮಣ್ಣ ಲಮಾಣಿ ಅವರುಗಳು ಕೋವಿಡ್ ನಿಯಂತ್ರಣಕ್ಕೆ ಅಗತ್ಯದ ಸಲಹೆ ಸೂಚಿಗಳನ್ನು ನೀಡಿದರು. ಜಿಲ್ಲಾ ಪಂಚಾಯತ ಸಿ.ಇ.ಓ ಭರತ ಎಸ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಯತೀಶ ಎನ್, ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.