ಸೋಂಕು ನಿಯಂತ್ರಣ, ತಜ್ಞನ ಅಭಿಪ್ರಾಯೇ ನೋಡಿ ಲಾಕ್‍ಡೌನ್ ನಿರ್ಧಾರ -ಸಚಿವ ಆನಂದಸಿಂಗ್

ಹೊಸಪೇಟೆ ಜೂ2: ಅವಳಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣವಾಗುತ್ತಿದ್ದು ಮುಂದಿನ ಪರಿಣಾಮಗಳನ್ನು ನೋಡಿಕೊಂಡು ಹಾಗೂ ತಜ್ಞರು ನೀಡುವ ಅಭಿಪ್ರಾಯಗಳನ್ನು ಆಧರಿಸಿಯೇ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಬಳ್ಳಾರಿ ಜಿಲ್ಲಾ ಉಸ್ತೂವಾರಿ ಸಚಿವ ಆನಂದಸಿಂಗ್ ಹೇಳಿದರು.
ಹೊಸಪೇಟೆಯಲ್ಲಿ ಬುಧುವಾರ ಸೋಂಕಿತ ವ್ಯಕ್ತಿಗಳು ಹಾಗೂ ಆಸ್ಪತ್ರೆಯ ಸ್ಥಳವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವಳಿ ಜಿಲ್ಲೆಯಲ್ಲಿ ಯಾವುದೆ ತೊಂದರೆ ಇಲ್ಲಾ, ಸದ್ಯ ಜಿಂದಾಲ್ ಸಂಸ್ಥೆಯಲ್ಲಿ 700ಕ್ಕೂ ಅಧಿಕ ಬೆಡ್ಡ್‍ಗಳು ಸಿದ್ದವಿದ್ದು ಎಂತಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ದವಿದೆ ಎಂದರು. ವೈಯುಕ್ತಿಕವಾಗಿ ನನ್ನ ಅಭಿಪ್ರಾಯದಂತೆ ಇನ್ನೊಂದು ವಾರ ಲಾಕ್‍ಡೌನ್ ಮಾಡುವುದು ಒಳಿತು ಎಂದರು.
3ನೇ ಅಲೆಗೂ ಪೂರ್ವಭಾವಿ ಸಭೆ:
ಬೇರೆ ರಾಜ್ಯಗಳ ಪರಿಸ್ಥಿತಿಯನ್ನು ಅವಲೋಕಿಸಿ ಜಿಂದಾಲ್‍ನಲ್ಲಿಯೇ ಸುಮಾರ 250 ಬೆಡ್ಡ್‍ಗಳನ್ನು ಮಕ್ಕಳ ಪ್ರತೇಕ ವಲಯವಾಗಿ ಮಾಡಲು ಹಾಗೂ ಜಿಲ್ಲಾಮಟ್ಟದಲ್ಲಿ ಮಕ್ಕಳ ತಜ್ಞರೊಂದಿಗೆ ಈಗಾಗಲೇ ಮೊದಲ ಸೂತ್ತಿನ ಮಾತುಕತೆ ಮಾಡಲಾಗಿದ್ದು, 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದರು.
ಹರಪನಹಳ್ಳಿ ಸೇರಿದಂತೆ ಪಶ್ಚಿಮ ತಾಲೂಕುಗಳಿಗೂ ಅನುಕೂಲವಾಗುವಂತೆ ಮಕ್ಕಳ 50 ಬೆಡ್ಡ್‍ಗಳ ಪ್ರತೇಕ ಆಸನ ವ್ಯವಸ್ಥೆಯೊಂದಿಗೆ 3ನೇ ಅಲೆ ವಿಶೇಷವಾಗಿ ಮಕ್ಕಳ ಚಿಕಿತ್ಸೆಗೆ ತೀರ್ಮಾನಿಸಲಾಗಿದ್ದು ಎಲ್ಲಿ ಮಾಡಬೇಕು ಎಂಬುದು ನಿಖರವಾಗಿ ನಿರ್ಧರಿಸಿಲ್ಲಾವಾದರೂ ಅವಳಿ ಜಿಲ್ಲೆಗಳಲ್ಲಿ (ಬಳ್ಳಾರಿ ಮತ್ತು ವಿಜಯನಗರ) ಯಾವುದೆ ತೊಂದರೆಯಾಗದಂತೆ ಕ್ರಮಕೈಗೊಂಡಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಪವನ ಮಾಲಪಾಟಿ, ಜಿಲ್ಲಾ ಎಸ್ಪಿ ಸೈದುಲ್ಲಾ ಅಡಾವತ್, ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ, ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಡಿಎಸ್‍ಪಿ ವಿ.ರಘುಕುಮಾರ ಸೇರಿದಂತೆ ಇತರರು ಹಾಜರಿದ್ದರು.