ಸೋಂಕು ನಿಯಂತ್ರಣ ಅಗತ್ಯ ಕ್ರಮಕ್ಕೆ ಆಗ್ರಹ

ಬೆಂಗಳೂರು, ಏ.೨೮- ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೋವಿಡ್ ತೀವ್ರವಾಗಿ ಹರಡಿರುವ ಕಾರಣ ದಿನಕ್ಕೊಂದು ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಆಗ್ರಹಿಸಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಇಂದು ಪತ್ರ ಬರೆದಿರುವ ಅವರು, ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿದೆ.ಆಕ್ಸಿಜನ್ ಸಕಾಲಕ್ಕೆ ಸಿಗದೆ ಸೋಂಕಿತರು ರಸ್ತೆ, ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಆಡಳಿತದಲ್ಲಿರುವ ಆರೋಗ್ಯ ಸಚಿವರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಟೀಕಿಸಿದ್ದಾರೆ.

ಅಲ್ಲದೆ, ಮಾತಿಗೊಮ್ಮೆ
ಜನರು ಎಚ್ಚೆತ್ತುಕೊಳ್ಳಬೇಕು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬ ಎಚ್ಚರಿಕೆ ನೀಡುತ್ತಿದ್ದೀರಿ. ಆದರೆ, ಆರೋಗ್ಯ ಸಚಿವರಾಗಿ ನಿಮ್ಮ ಕರ್ತವ್ಯ ಏನು ಎಂಬುದನ್ನು ಮೊದಲು ತಿಳಿಸಿ, ಜನರು ಆಂಬ್ಯುಲೆನ್ಸ್ ಸಿಗದೆ ಆಸ್ಪತ್ರೆಗೆ
ಹೋಗಲಾಗದೆ ಮನೆಯಲ್ಲೇ ಸಾಯುವ ಪರಿಸ್ಥಿತಿ ನಗರದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಮಹಾಲಕ್ಷ್ಮಿಲೇಔಟ್‌ನಲ್ಲಿ ಆ?ಯಂಬುಲೆನ್ಸ್‌ಗಾಗಿ ದಿನವಿಡೀಕಾದರೂ
ವಾಹನ ಬಂದಿಲ್ಲ. ಅದೇ ರೀತಿಯಾಗಿ ಮಂಜುನಾಥನಗರದ ನಿವಾಸಿವೊಬ್ಬರು ನಿಧನ ಹೊಂದಿದ್ದು, ಮೂರು ದಿನಗಳಾದರು ಅವರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಜ್ಞ, ವೈದ್ಯರುಗಳ ಸಲಹೆ ತಿರಸ್ಕಾರ ಮಾಡಿ ಎರಡನೇಯ ಅಲೆ ಮುಂಜಾಗ್ರತೆವಹಿಸದೆ ಇರುವ ಕಾರಣ ನಗರಕ್ಕೆ ಈ ಪರಿಸ್ಥಿತಿ ಉಂಟಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಗರದಲ್ಲಿ ಇನ್ನಷ್ಟು ಸಾವಿನ ಮನೆಗಳ ನಿರ್ಮಾಣವಾಗುವುದನ್ನು ತಡೆಯಲು ಸಾರ್ವಜನಿಕರಿಗೆ ಸರ್ಕಾರ ಮತ್ತು ಮಹಾನಗರ ಪಾಲಿಕೆಯು
ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ಶಿವರಾಜು ಒತ್ತಾಯಿಸಿದರು.