ಸೋಂಕು ನಿಯಂತ್ರಣಕ್ಕೆ ಸಹಕರಿಸಲು ಮನವಿ

ಕೆ.ಆರ್.ಪೇಟೆ:ಏ:23: ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು ಸಾರ್ವಜನಿಕರು ಅವುಗಳನ್ನು ಪಾಲನೆ ಮಾಡುವ ಮೂಲಕ ಕೊರೋನಾ ನಿಯಂತ್ರಣಕ್ಕೆ ತಾಲ್ಲೂಕು ಆಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಮನವಿ ಮಾಡಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಪತ್ರಿಕಾಗೋ ಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಸೋಮವಾ ರದಿಂದ ಶುಕ್ರವಾರ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆಯವರೆಗೆ ಶಾಲಾ ಕಾಲೇಜುಗಳು, ಚಿತ್ರಮಂದಿರಗಳು, ಜಿಮ್, ಶೂ ಅಂಗಡಿಗಳು, ಬಟ್ಟೆ, ಚಿನ್ನಾಭರಣ, ಟಿವಿ, ಮೊಬೈಲ್, ಫ್ರಿಡ್ಜ್, ಬಾರ್, ಸ್ಪೋಟ್ರ್ಸ, ಮತ್ತು ಎ,ಬಿ,ಸಿ ವರ್ಗದ ದೇವಾಲಯಗಳು ಇರುವುದಿಲ್ಲ. ಆದರೆ ದೇವಾಲಯ, ಚರ್ಚ, ಮಸೀದಿಗಳಲ್ಲಿ ಪೂಜೆಗೆ ಒಬ್ಬರಿಗೆ ಮಾತ್ರ ಅವಕಾಶ ಇರುತ್ತದೆ, ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ.
ಉಳಿದಂತೆ ಹೂವಿನ ಅಂಗಡಿಗಳು, ಹಣ್ಣಿನ ಅಂಗಡಿಗಳು, ದಿನಸಿ ಅಂಗಡಿಗಳು, ಬೇಕರಿಗಳು, ವೈನ್‍ಶಾಪ್‍ಗಳು, ಬಾರ್ ಗಳು(ವೈನ್ ಶಾಪ್ ಮತ್ತು ಬಾರ್ ಗಳಲ್ಲಿ ಕೇವಲ ಪಾರ್ಸಲ್ ಕೊಡಬಹುದು ಅಲ್ಲೇ ಕುಳಿತು ಕುಡಿಯುವ ಹಾಗಿಲ್ಲ ಅಲ್ಲೇ ನಿಂತುಕೊಂಡು ಕುಡಿಯುವ ಹಾಗಿಲ್ಲ) ಲಾಡ್ಜ್‍ಗಳು, ಹೋಟೆಲ್‍ಗಳು(ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕುಳಿತು ತಿನ್ನುವ ಹಾಗಿಲ್ಲ. ಕೇವಲ ಪಾರ್ಸಲ್‍ಗಳನ್ನು ಕೊಡಬಹುದು. ಬ್ಯಾಂಕ್‍ಗಳು, ಇನ್ಶೂರೆನ್ಸ್ ಕಚೇರಿಗಳು, ಎಟಿಎಂಗಳು, ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳು, ಹೋಮ್ ಡಿಲಿವರಿ ಗಳು, ಇ ಕಾಮರ್ಸ್, ವೇರ್ ಹೌಸ್, ಕಟ್ಟಡ ಕಾಮಗಾರಿಗಳು ಹಾಗೂ ಇತರೆ ಕಾಮಗಾರಿಗಳಿಗೆ ಸಂಬಂಧಿಸಿದ ಸಿಮೆಂಟ್ ಅಂಗಡಿಗಳು, ಹಾರ್ಡ್ ವೇರ್ ಶಾಪ್ ಗಳು, ಎಲೆಕ್ಟ್ರಿಕಲ್ ಶಾಪ್‍ಗಳು, ಸಲೂನ್ ಗಳು ಮತ್ತು ಬ್ಯೂಟಿಪಾರ್ಲರ್‍ಗಳು ಪಿಪಿಇ ಕಿಟ್ ಧರಿಸಿ ಕೆಲಸ ಮಾಡಬೇಕು. ಹಾಲಿನ ಅಂಗಡಿಗಳು ಹಾಗೂ ದನಕರುಗಳಿಗೆ ನೀಡುವ ಆಹಾರದ ಅಂಗಡಿಗಳು, ಫುಡ್ ಪೆÇ್ರಸೆಸಿಂಗ್ ಯುನಿಟ್‍ಗಳಿಗೆ ಅವಕಾಶವಿರುತ್ತದೆ.
ನೈಟ್ ಕಫ್ರ್ಯೂ ವೇಳೆ ಅಂತರ ರಾಜ್ಯದ ವಾಹನಗಳಿಗೆ ಅವಕಾಶವಿದ್ದು ಮೆಡಿಕಲ್ ಎಮರ್ಜೆನ್ಸಿಯವರಿಗೆ ಮಾತ್ರ ಓಡಾಡಲು ಅವಕಾಶವಿದೆ ಉಳಿದಂತೆ ಅನಗತ್ಯವಾಗಿ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮದುವೆಗೆ ತೆರೆದ ಪ್ರದೇಶದಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ತಾಲ್ಲೂಕಿನಾದ್ಯಂತ ಚಂದಗೋನಳ್ಳಿ ಅಮ್ಮ, ಗವಿರಂಗನಾಥ ದೇವಾಲಯ ಮುಂತಾದ ಕಡೆಗಳಲಿ ಪರ ನಾಮಕರಣ ಮುಂತಾದುವುಗಳನ್ನು ನಿಷೇಧಿಸಲಾಗಿದೆ.
ವೀಕೆಂಡ್ ಕಫ್ರ್ಯೂನಲ್ಲಿ ಶುಕ್ರವಾರರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ ಆರು ಗಂಟೆಯವರೆಗೆ ಬೆಳಿಗ್ಗೆ ಆರುಗಂಟೆಯಿಂದ ಹತ್ತು ಗಂಟೆಯವರೆಗೆ ಹಣ್ಣು, ದಿನಸಿ, ತರಕಾರಿ, ಹಾಲು, ಮಾಂಸ, ಮೀನು, ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಕಛೇರಿಗಳ ನೌಕರರಿಗೆ ಮಾತ್ರ ಕಛೇರಿಗೆ ತೆರಳಲು ಅವಕಾಶವಿದ್ದು ಸಾರ್ವಜನಿಕರಿಗೆ ಓಡಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ವೃತ್ತ ನಿರೀಕ್ಷಕ ಎಂ.ಕೆ.ದೀಪಕ್ ಮಾತನಾಡಿ ತಾಲ್ಲೂಕಿನಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು ಮೇಲಿನ ಆಧೇಶಗಳನ್ನು ಉಲ್ಲಂಘನೆ ಮಾಡಿದವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗುವುದು. ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪಟ್ಟಣ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ ಸೇರಿದಂತೆ ಹಲವರು ಹಾಜರಿದ್ದರು.