ಸೋಂಕು ನಿಯಂತ್ರಣಕ್ಕೆ ಕಫ್ರ್ಯೂ ಅನಿವಾರ್ಯ

ಪಿರಿಯಾಪಟ್ಟಣ:ಏ:29: ಕೊರೊನಾ ಸೊಂಕಿನ ಹೆಚ್ಚಳ ತಡೆಗಟ್ಟಲು ರಾಜ್ಯಾದ್ಯಂತ ಹದಿನಾಲ್ಕು ದಿನಗಳ ಕಾಲ ಜನತಾ ಕಫ್ರ್ಯೂ ಅನಿವಾರ್ಯವಾಗಿತ್ತು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆ ಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಸಂಬಂಧ ತಾಲ್ಲೂಕು ಆಡಳಿತ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿ, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಕೊರತೆ ಇಲ್ಲ, ಜಿಲ್ಲೆಗೆ ನಾಲ್ಕು ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು ಕೊರೊನಾ ಸೋಂಕು ಹೆಚ್ಚಳ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ.
ಜಿಲ್ಲೆಗೆ 100 ವೆಂಟಿಲೇಟರ್ ಗಳನ್ನು ಹೊಸದಾಗಿ ತರಿಸಲಾಗುತ್ತಿದ್ದು ಈಗಾಗಲೆ 50 ವೆಂಟಿಲೇಟರ್ ಗಳು ಬಂದಿವೆ, ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ 71 ಲ್ಯಾಬ್ ಗಳಿಗೆ ಕೋವಿಡ್ ಸೋಂಕು ಪತ್ತೆ ಹಚ್ಚಲು ಅನುಮತಿ ನೀಡಲಾಗಿದೆ, ಸೋಂಕಿತರ ಬಗ್ಗೆ ಸುಳ್ಳು ವದಂತಿ ಹರಡುವುದನ್ನು ತಡೆಗಟ್ಟಲು ಅಂಕಿ ಅಂಶ ಸಹಿತ ಪ್ರತಿದಿನದ ಮಾಹಿತಿಯನ್ನು ಮಾದ್ಯಮಗಳಿಗೆ ನೀಡುವಂತೆ ಸೂಚಿಸಿದರು, ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೇವಲ ಆರೋಗ್ಯ ಆರಕ್ಷಕ ಕಂದಾಯ ಇಲಾಖೆ ಅಲ್ಲದೆ ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ತಿಳಿಸಿ ಸೋಂಕಿತರಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಕೊರೋನಾ ಸೋಂಕಿತರಿಗೆ ತಾಲ್ಲೂಕು ಹಂತದಲ್ಲಿ ಸೇವೆ ಸಿಗುವಂತಾಗಬೇಕು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾದರೆ 100-150 ಆಕ್ಸಿಜನ್ ಸಹಿತ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಕೊರೊನಾ ಹೆಲ್ಪ್ ಲೈನ್ ಅಥವಾ ಕಾಲ್ ಸೆಂಟರ್‍ಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಕೊರೋನಾ ಸೋಂಕಿತರಿಗೆ ಕರೆ ಮಾಡಿ ದೈರ್ಯ ತುಂಬುವ ಕೆಲಸ ಮಾಡ ಬೇಕಿದೆ, ಕೊರೋನಾ ಸೋಂಕಿತರಿಗೆ ಹೋಂ ಇಸೋಲೇಷನರ್ ಮಾಡಲು ಬಿಡದೆ ಪ್ರತ್ಯೇಕವಾಗಿ ಕೋವಿಡ್ ಕೇರ್ ಸಂಟರ್ ನಲ್ಲಿ ಇರಿಸಲು ಆದ್ಯತೆ ನೀಡಿ ಇದರಿಂದ ಮನೆ ಮಂದಿಗೆಲ್ಲ ಹರಡುವುದನ್ನು ತಡೆಯಲು ಸಾಧ್ಯ ಎಂದು ಸೂಚಿಸಿದರು.
ಮೇ.1 ರಿಂದ 18 ರಿಂದ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಈಗಿನಿಂದಲೆ ಸಿದ್ದತೆ ಮಾಡಿಕೊಳ್ಳಿ ಎಷ್ಟು ಬೇಡಿಕೆ ಇದೆ ಎಂಬುದರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಲಸಿಕೆ ಸಂಗ್ರಹಿಸಿಟ್ಟುಕೊಳ್ಳುವಂತೆ ತಿಳಿಸಿ ತಂಬಾಕು ಬೆಳೆಗಾರರಿಗೆ ರಸಗೊಬ್ಬರವನ್ನು ವಿತರಿಸುವಾಗ ರೈತರಿಗೆ ತೊಂದರೆಕೊಡಬೇಡಿ ಅವರು ತರುವ ತಂಬಾಕು ಪರವಾನಗಿ ನೋಡಿ ಸಂಚರಿಸಲು ಅವಕಾಶ ನೀಡಿ ಎಂದು ಆರಕ್ಷಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಎಳನೀರು ಮಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು.
ಜಿ.ಪಂ.ಸಿಇಓ ಯೋಗೇಶ್ ಮಾತನಾಡಿ ಆರೋಗ್ಯ ಕಂದಾಯ ಆರಕ್ಷಕ ಇಲಾಖೆ ಅಲ್ಲದೆ ಪ್ರತಿಯೊಂದು ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.
ಶಾಸಕ ಕೆ.ಮಹದೇವ್ ಮಾತಾನಾಡಿ ಕೃಷಿ ಚಟುವಟಿಕೆ, ಕೂಲಿ ಕಾರ್ಮಿಕರ ಕೆಲಸಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ನಿಗಾವಹಿಸಿ ಹೋಬಳಿ ಕೇಂದ್ರಗಳಲ್ಲಿ ಅನಗತ್ಯ ಸಂಚಾರ ಕಡಿವಾಣ ಹಾಕುವಂತೆ ಸೂಚಿಸಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಕೊರೊನಾ ಸೋಂಕು ತಡೆಗಟ್ಟಲು ಕೈಗೊಂಡಿರುವ ಪ್ರಗತಿ ಬಗ್ಗೆ ವಿವರಿಸಿದರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
ಡಾ.ಜೆ ಶ್ರೀನಿವಾಸ್ ಪಟ್ಟಣದ ಆಸ್ಪತ್ರೆಯಲ್ಲಿನ ಕೊವಿಡ್ ಕೇರ್ ಸೆಂಟರ್‍ನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು, ತಾಲ್ಲೂಕು ಆರೋಗ್ಯಾ ಧಿಕಾರಿ ಡಾ.ಶರತ್ ಬಾಬು ಲಸಿಕೆ ಹಾಗೂ ಕೊರೊನಾ ಪರೀಕ್ಷೆ ಬಗ್ಗೆ ಕೈಗೊಂಡಿರುವ ಕ್ರಮ ಗಳ ಬಗ್ಗೆ ವಿವರಿಸಿದರು.
ಹುಣಸೂರು ಉಪ ವಿಭಾಗಾಧಿಕಾರಿ ವೀಣಾ, ಡಿವೈಎಸ್ ಪಿ ರವಿಪ್ರಸಾದ್, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪಾ, ಪುರಸಭೆ ಅಧ್ಯಕ್ಷ ಮಂಜು ನಾಥ್ ಸಿಂಗ್, ಇನ್ಸ್ ಪೆಕ್ಟರ್ ಗಳಾದ ಬಿ.ಆರ್ ಪ್ರದೀಪ್, ಜಗದೀಶ್, ಪಿಎಸ್‍ಐ ಸದಾ ಶಿವ ತಿಪರೆಡ್ಡಿ, ಕೃಷಿ ಇಲಾಖೆ ಎಡಿಎ ಶಿವ ಕುಮಾರ್ ಮತ್ತು ವಿವಿಧ ಇಲಾಖೆಯ ಅಧಿಕಾ ರಿಗಳು ಹಾಜರಿದ್ದರು.