ಸೋಂಕು ದೂರವಾಗಿಲ್ಲ: ಎಚ್ಚರ ತಪ್ಪದಿರಿ

ನವದೆಹಲಿ, ನ.೨೮- ದೇಶದಲ್ಲಿ ಕೋವಿಡ್ ಸೋಂಕು ಇನ್ನೂ ದೂರವಾಗಿಲ್ಲ. ಜನರು ಯಾವುದೇ ಕಾರಣಕ್ಕೂ ಎಚ್ಚರ ತಪ್ಪದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.
ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಆಗಮಾತ್ರ ಸೋಂಕು ಹರಡದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಆಕಾಶವಾಣಿಯ ಮನ್ ಕಿ ಬಾತ್ ಸರಣಿಯ ೮೩ ನೇ ಸಂಚಿಕೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದಷ್ಟೂ ಬರದಂತೆ ತಡೆಯಬಹುದು ಆ ಕೆಲಸವನ್ನು ಮಾಡಿ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ನವೋದ್ಯಮ ಗಳ ಹೊಸಯುಗ ಆರಂಭವಾಗಿದ್ದು ಇದರಿಂದ ಬಂಡವಾಳ ಆಕರ್ಷಣೆಗೆ ಸಹಕಾರಿಯಾಗಿದೆ.ವರ್ಷದಿಂದ ವರ್ಷಕ್ಕೆ ನವೋದ್ಯಮಗಳು ಹೆಚ್ಚಾಗುತ್ತಿವೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ನವೋದ್ಯಮಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಆಕರ್ಷಣೆಯೂ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ .
ವಿವಿಧ ಕ್ಷೇತ್ರಗಳಲ್ಲಿ ನವೋದ್ಯಮಗಳುಅತಿ ವೇಗದಲ್ಲಿ ಬೆಳೆಯುತ್ತಿವೆ. ಇದರಿಂದಾಗಿ ಸಣ್ಣ ಸಣ್ಣ ನಗರಗಳಲ್ಲಿ ಬಂಡವಾಳ ಆಕರ್ಷಣೆ ಸೇರಿದಂತೆ ಉದ್ಯೋಗವಕಾಶ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸುವರ್ಣ ಮಹೋತ್ಸವ:
೧೯೭೧ ರ ಯುದ್ಧದದ ಗೆಲುವಿನ ಸುವರ್ಣಮಹೋತ್ಸವವನ್ನು ಮುಂದಿನ ತಿಂಗಳು ಆಚರಿಸಲಾಗುತ್ತಿದೆ . ಈ ಹಿನ್ನಲೆಯಲ್ಲಿ ಎಲ್ಲಾ ದೇಶದ ಸೈನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಈ ಸಂದರ್ಭದಲ್ಲಿ ನೌಕಾಪಡೆ ದಿನ ಮತ್ತು ರಾಷ್ಟ್ರೀಯ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ ಹಿನ್ನಲೆಯಲ್ಲಿ ದೇಶದ ಎಲ್ಲಾ ಸೈನಿಕರಿಗೆ ಮುಂಚಿತವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಜಾನ್ಸಿ ಮತ್ತು ಬುಂದೇಲ್ಖಂಡ್ ಪಾತ್ರ ಹಿರಿದು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದ ಅವರು ಇದೇ ವೇಳೆ ಹಲವು ಸ್ವಾತಂತ್ರ್ಯ ಹೋರಾಟಗಾರರ ಗುಣಗಾನ ಮಾಡಿದ್ದಾರೆ

ಉತ್ತರ ಪ್ರದೇಶದ ಸ್ಥಳೀಯ ಜನರು ಜಲೂನ್ ನಲ್ಲಿರುವ ನೂನ್ ನದಿಯ ಸಂರಕ್ಷಣೆಗೆ ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹ ತೋರುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಗೌರವ ನಮನ

ಡಿಸೆಂಬರ್ ೬ ರಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಾ ಬಿಆರ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಬಾಬಾಸಾಹೇಬರು ಕೊಟ್ಟಿರುವ ಸನ್ನಿಧಾನದಿಂದಾಗಿ ಎಂದು ದೇಶ ಮತ್ತಷ್ಟು ಬಲಿಷ್ಠವಾಗಿದೆ ಮೊನ್ನೆಯಷ್ಟೇ ಸಂವಿಧಾನದ ದಿನ ಆಚರಣೆ ಮಾಡಲಾಗಿದೆ ಅವರ ತತ್ವ ಆದರ್ಶಗಳನ್ನು ಪಾಲಿಸೋಣ ಎಂದು ಅವರು ಹೇಳಿದ್ದಾರೆ.

ಅಂಬೇಡ್ಕರ್ ಅವರು ಜೀವನದಲ್ಲಿ ಸಮಯವನ್ನು ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಹಿನ್ನೆಲೆಯಲ್ಲಿ ದೇಶದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಿಳಿಸಿದ್ದಾರೆ.