ಸೋಂಕು ತುಸು ಹೆಚ್ಚಳ

ಬೆಂಗಳೂರು,ಸೆ.೨೧- ದೇಶದಲ್ಲಿ ನಿನ್ನೆ ಕಡಿಮೆಯಾಗಿದ್ದ ಕೊರೊನಾ ಸೋಂಕು ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಈ ಮೂಲಕ ಸೋಂಕು ಸಂಖ್ಯೆ ಹಾವು ಏಣಿ ಆಟ ಆಡುತ್ತಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಂಕು ತುಸು ಏರಿಕೆಯಾದರೂ ಅದಕ್ಕಿಂತ ಚೇತರಿಕೆ ಸಂಖ್ಯೆ ಹೆಚ್ಚಾಗಿದೆ. ಹೊಸದಾಗಿ ೪,೫೧೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೫,೬೪೦ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ..

ಹೊಸದಾಗಿ ಚೇತರಿಸಿಕೊಂಡವರೂ ಸೇರಿದಂತೆ ಇಲ್ಲಿಯವರೆಗೂ ೪,೩೯,೭೨,೯೮೦ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಅಲ್ಲದೆ ಇದುವರೆಗೂ ಸೋಂಕಿಂದ ಸಾವನ್ನಪ್ಪಿದವರ ಸಂಖ್ಯೆ, ೫,೨೮,೪೦೩ ಕ್ಕೆ ಏರಿಕೆಯಾಗಿದೆ. ಸೋಂಕು ಏರಿಳಿತದ ನಡುವೆ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೧.೩೩ ರಷ್ಟು ಇದ್ದು ದೇಶದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ೪೬,೨೧೬ ಮಂದಿಯಲ್ಲಿ ಇದೆ.

ಸೋಂಕು ಏರಿಳಿತ ಹಿನ್ನೆಲೆಯಲ್ಲಿ ಒಟ್ಟಾರೆ ಸೋಂಕಿನ ಶೇಕಡಾವಾರು ೦.೧೦ಕ್ಕೆ ಇಳಿಕೆಯಾಗಿದೆ. ಹೊಸದಾಗಿ ೧೨,೨೭,೦೫೪ ಡೋಸ್ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ೨೧೬,೯೫,೫೧,೫೯೧ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ.೧.೩೩ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೧.೮೦ ರಷ್ಟು ಇದೆ. ದೇಶಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೩,೩೯,೯೯೪ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ಒಟ್ಟಾರೆ ೮೯.೨೩ ಕೋಟಿ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನಿತ್ಯ ಸೋಂಕಿನ ಏರಿಳಿತದ ನಡುವೆ ಒಟ್ಟಾರೆ ಸೋಂಕಿನ ಚೇತರಿಕೆ ಸಂಖ್ಯೆ ಶೇ.೯೮.೭೧ ರಷ್ಟು ಇದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.