ಸೋಂಕು ತುಸು ಇಳಿಕೆ

ನವದೆಹಲಿ,ಏ.೯- ದೇಶದಲ್ಲಿ ಕಳೆದ ಎರಡು ದಿನಗಳಿಂದ ೬ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದ್ದ ನಡುವೆಯೇ ಇಂದು ತುಸು ಸೋಂಕು ಕಡಿಮೆಯಾಗಿದೆ.
ನಿನ್ನೆ ೬,೧೫೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು.ಕಳೆದ ೨೪ ಗಂಟೆಯ ಅವಧಿಗಲ್ಲಿ ೫,೩೫೭ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ ೩,೭೨೬ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನಿನ್ನೆ ಕಾಣಿಸಿಕೊಂಡ ಸೋಂಕಿಗಿಂತ ಇಂದು ತುಸು ಇಳಿಕೆಯಾಗಿದ್ದು ನೆಮ್ಮದಿ ನಿಟ್ಟಿಸಿರುವ ಬಿಡುವಂತೆ ಮಾಡಿದೆ.

ಸೋಂಕು ನಿತ್ಯ ಏರಿಳಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೨,೮೧೪ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸೋಂಕಿನಿಂದ ಹೊಸದಾಗಿ ೩,೭೨೬ ಮಂದಿ ಚೇತರಿಸಿಕೊಂಡಿದ್ದು ಚೇತರಿಕೆಯ ಒಟ್ಟು ಸಂಖ್ಯೆ ೪,೪೧,೯೨,೮೩೭ ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೦.೭ ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದೆ.

ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಮೃತಪಟ್ಡಿರುವರೂ ಸೇರಿದಂತೆ ಇಲ್ಲಿಯ ತನಕ ೫,೩೦,೯೬೦ ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೭೪ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೭ರಷ್ಟು ಇದ್ದು ದಿನದ ಪಾಸಿಟಿವಿಟಿ ಪ್ರಮಾಣ ಶೇ
೩.೩೯ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ,ಶೇ.೩.೫೪ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧,೫೭,೮೯೪ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೯೨.೨೭ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ. ಇದೇ ವೇಳೆ ೬೫೯ ಮಂದು ಲಸಿಕೆ ನೀಡಿದ್ದು ಇದುವರೆಗೆ ೨೨೦.೬೬ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.