ಸೋಂಕು ತಡೆಗೆ ಸುದೀರ್ಘ ಲಾಕ್‌ಡೌನ್ ಅನಿವಾರ್ಯ

ನವದೆಹಲಿ,ಏ.೧೮- ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳನ್ನು ತಡೆಯಲು ಸುದೀರ್ಘ ಅವಧಿಯ ಲಾಕ್‌ಡೌನ್ ಒಂದೇ ಇದಕ್ಕೆ ಪರಿಹಾರ ಎಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಯ ವೈದ್ಯ ಡಾ. ಶ್ಯಾಮ್‌ಅಗರ್‌ವಾಲ್ ತಿಳಿಸಿದ್ದಾರೆ.
ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕಿನ ಚೈನ್ ತುಂಡರಿಸಲು ಲಾಕ್‌ಡೌನ್ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ದೇಶದಲ್ಲಿ ೧,೩೦೦ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದು, ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವ ಬೆನ್ನಲ್ಲೆ ವೈದ್ಯರು ಲಾಕ್‌ಡೌನ್ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
೪ ರಿಂದ ೫ ದಿನಗಳನ್ನು ಸೋಂಕಿನ ಪ್ರಮಾಣ ದುಪ್ಪಟ್ಟಾಗಿದೆ. ಈ ಸೋಂಕಿನ ಪ್ರಸರಣವನ್ನು ತಡೆಯಬೇಕಾದರೆ ಪ್ರಾಥಮಿಕ ಹಂತದಲ್ಲಿ ದೇಶಾದ್ಯಂತ ೭ ದಿನಗಳ ಕಾಲ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದು ಹೇಳಿದರು.
ಇದನ್ನು ಹೀಗೆ ಬಿಟ್ಟರೆ ಮುಂಬರುವ ದಿನಗಳನ್ನು ಇನ್ನಷ್ಟು ಗಂಭೀರ ಪರಿಸ್ಥಿತಿ ಎದುರಾಗಲಿದೆ. ಇಂಗ್ಲೆಂಡ್, ಫ್ರಾನ್ಸ್ ಮತ್ತು ಇಟಲಿ ದೇಶಗಳಲ್ಲಿ ಸೋಂಕು ತಡೆಗೆ ಲಾಕ್‌ಡೌನ್ ಹೇರಲಾಗಿತ್ತು ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ.