ಸೋಂಕು ತಡೆಗೆ ರಾಜ್ಯಗಳಿಗೆ ಕೇಂದ್ರದ ಸೂಚನೆ

ನವದೆಹಲಿ,ಏ,೭- ದೇಶದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಡಾ,ಮನ್ಸುಖ್ ಮಾಂಡವೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ತುರ್ತಾಗಿ ಬಿಗಿ ಕ್ರಮಕೈಗೊಳ್ಳುವ ಜೊತೆಗೆ ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ನಿಗ್ರಹಕ್ಕೆ ಒತ್ತು ನೀಡುವಂತೆ ಸೂಚಿಸಿದ್ದಾರೆ

ಕಳೆದ ೨೪ ಗಂಟೆಗಳಲ್ಲಿ ೬ ಸಾವಿರಕ್ಕೂ ಹೆಚ್ಚಿನ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಂದೊಂದಿಗೆ ದೆಹಲಿಯಲ್ಲಿಂದು ಮಹತ್ವದ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ.

ದೇಶದಲ್ಲಿ ಕೊವಿಡ್ ಸೋಂಕಿನ ಮೂರನೇ ಅಲೆಯ ಸೋಂಕು ತೀವ್ರವಾಗಿ ಇಳಿಕೆಯಾಯಿತು ಎಂದು ನಿಟ್ಟಿಸಿರುವ ಬಿಡುವಾಗಲೇ ಸೋಂಕು ಮತ್ತಷ್ಟು ಹೆಚ್ಚಾಗಿರುವುದು ಆತಂಕತಕ್ಕೆ ಎಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ರಾಜ್ಯಗಳು ಸೇರಿದಂತೆ ಸೋಂಕು ಕಾಣಿಸಿಕೊಳ್ಳುತ್ತಿರುವ ರಾಜ್ಯಗಳಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ಧಾರೆ.

ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ತಡೆಗೆ ಮುಂದಾಗಬೇಕು, ಎದುರಾಗುವ ಪರಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಎಂದು ಅವರು ನಿರ್ದೇಶನ ನೀಡಿದ್ದಾರೆ.

ಸೋಂಕು ಮತ್ತಷ್ಟು ಹೆಚ್ಚಳ:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಹೆಚ್ಚಳವಾಗುತ್ತಿದ್ದು ಇಂದು ೬೦೫೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಹೆಚ್ಚು ಮಾಡಿದೆ.

ದೇಶದಲ್ಲಿ ನಿನ್ನೆ ಕಾಣಿಸಿಕೊಂಡ ಸೋಂಕಿಗಿಂತ ಶೇ.೧೩ ರಷ್ಟು ಸೋಂಕು ಹೆಚ್ಚಾಗಿದೆ. ಸೋಂಕು ನಿತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨೮,೩೦೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸೋಂಕಿನಿಂದ ೩,೩೨೦ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದು ಇದುವರೆಗೆ ಚೇತರಿಕೆಯ ಒಟ್ಟು ಪ್ರಮಾಣ ೪,೪೧,೮೫,೮೫೮ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೦.೬ ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದೆ.

ನಿನ್ನೆ ೫,೩೩೫ ಮಂದಿಯಲ್ಲಿ ಹೊಸ ಕೋವಿಡ್ ಸೋಂಕು ಕಾಣಿಸಕೊಂಡಿದೆ.೧೩ ಮಂದಿ ಸಾವನ್ನಪ್ಪಿದ್ದಾರೆ ಇಂದು ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ದಿನೇ ದಿನೇ ಸಕ್ರಿಯ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ . ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೬ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಮೃತಪಟ್ಡಿರುವರೂ ಸೇರಿದಂತೆ ಇಲ್ಲಿಯ ತನಕ ೫,೩೦,೯೦೫೦ ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೭೫ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೩.೦೯ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ,ಶೇ.೩.೦೨ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧,೭೮,೫೩೩ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೯೨.೨೫ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ. ಇದೇ ವೇಳೆ ೨೩೩೪ ಮಂದು ಲಸಿಕೆ ನೀಡಿದ್ದು ಇದುವರೆಗೆ ೨೨೦.೬೬ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.