ಸೋಂಕು ತಡೆಗೆ ಡಬಲ್ ಮಾಸ್ಕ್ ಧರಿಸಿ


ನವದೆಹಲಿ,ಏ.೨೧- ಕೊರೊನಾ ಉಲ್ಬಣಗೊಳ್ಳುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಮಾಸ್ಕ್ ಬದಲಿಗೆ ಎರಡು ಮಾಸ್ಕ್ ಧರಿಸುವುದು ಒಳಿತು.
ದೇಶಾದ್ಯಂತ ಕೊರೊನಾ ಅಬ್ಬರ ತಾಂಡವವಾಡುತ್ತಿದ್ದು, ಒಂದು ಮಾಸ್ಕ್‌ಗೆ ಬದಲಾಗಿ ಎರಡು ಮಾಸ್ಕ್ ಧರಿಸಿದರೆ ಇನ್ನಷ್ಟು ಸುರಕ್ಷಿತವಾಗಿರಲಿದೆ ಎಂಬ ಅಂಶ ವೈದ್ಯಕೀಯ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಎರಡು ಮಾಸ್ಕ್ ಧರಿಸಿದರೆ ಒಂದು ಮಾಸ್ಕ್‌ನಿಂದ ಕೊರೊನಾ ಸೋಂಕು ಕಡಿಮೆ ಮಾಡಬಹುದು ಎಂದು ವೈದ್ಯಕೀಯ ತಜ್ಞೆ ಡಾ. ಕೀರ್ತಿ ಸಬನಿಸ್ ಹೇಳಿದ್ದಾರೆ.
ಸೋಂಕು ತಡೆಗೆ ಇನ್ನಷ್ಟು ಪರಿಣಾಮಕಾರಿ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿರುವ ಡಾ. ಕೀರ್ತಿ, ಸೋಂಕಿನ ಪ್ರಸರಣ ಶರವೇಗದಲ್ಲಿ ಹರಡುತ್ತಿದ್ದು, ಎರಡು ಮಾಸ್ಕ್ ಧರಿಸಿರುವುದರಿಂದ ತಡೆಗಟ್ಟಬಹುದಾಗಿದೆ. ಈ ಕುರಿತು ಕಾಯಿಲೆ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರ ನಡೆಸಿದ ಇತ್ತೀಚಿನ ಅಧ್ಯಯನದಿಂದ ದೃಢಪಟ್ಟಿದೆ. ಹೀಗಾಗಿ ಪ್ರತಿಯೊಬ್ಬರು ಎರಡು ಮಾಸ್ಕ್ ಧರಿಸಿದರೆ ಶೇ.೯೬.೪ ರಷ್ಟು ಸೋಂಕನ್ನು ತಡೆಗಟ್ಟಬಹುದಾಗಿದೆ ಎಂದರು.
ಒಂದರ ಮೇಲೆ ಒಂದು ಮಾಸ್ಕ್ ಹಾಕಿದರೆ ಡಬಲ್ ಮಾಸ್ಕ್ ಆಗುತ್ತದೆ.
ಹೊರಗಿನ ಮಾಸ್ಕ್ ಒಳಗಿನ ಮುಖವಾಡದ ಅಂಚುಗಳಿಗೆ ಮೃಧುವಾದ ಒತ್ತಡವನ್ನು ಅನ್ವಯಿಸಬಹುದು ಮತ್ತು ಉತ್ತಮ ಮುದ್ರೆಯನ್ನು ರಚಿಸಬಹುದು. ವೈರಾಣು ಉಸಿರಾಟದ ಹನಿಗಳ ಮೂಲಕ ಹರಡುತ್ತಿದೆ.
ಎರಡು ಮಾಸ್ಕ್ ಧರಿಸುವುದರಿಂದ ತಮ್ಮ ಸುತ್ತಮುತ್ತ ಇರುವವರು ಸೀನಿದಾಗ ಅಥವಾ ಕೆಮ್ಮಿದಾಗ ಅದರಿಂದ ರಕ್ಷಣೆ ಸಿಗಲಿದೆ. ಹೀಗಾಗಿ, ಜನಸಂದಣಿ ಇರುವ ಪ್ರದೇಶಗಳಲ್ಲಿ ಡಬಲ್ ಮಾಸ್ಕ್ ಧರಿಸುವ ಬಗ್ಗೆ ಸಾರ್ವಜನಿಕರು ಚಿಂತನೆ ನಡೆಸುವುದು ಒಳಿತು.