ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ

ಮುಳಬಾಗಿಲು, ಏ, ೩೦- ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರನ್ನು ನೇಮಕ ಮಾಡಲಾಗಿದ್ದು ಸದರಿ ತಂಡದ ಸದಸ್ಯರು ಗ್ರಾಮಗಳಲ್ಲಿ ಕೊರೊನೊ ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾgಂದು ತಾಯಲೂರು ಗ್ರಾ.ಪಂ ಪಿಡಿಓ ಮಂಗಳಾಂಭ ತಿಳಿಸಿದ್ದಾರೆ.
ತಾಯಲೂರಿನಲ್ಲಿ ಬ್ಲಿಚಿಂಗ್ ಪೌಡರ್ ಸಿಂಪಡನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರತಿ ಗ್ರಾಮದಲ್ಲಿ ಬ್ಲಿಚಿಂಗ್ ಪೌಡರ್, ಪಿನಾಯಿಲ್ ಸಿಂಪಡನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೊರೊನೊ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರತಿ ಗ್ರಾಮದ ಶಾಲೆ, ಆಸ್ಪತ್ರೆ, ಸರಕಾರಿ ಕಚೇರಿ ಸೇರಿದಂತೆ ಇತರೆ ಪ್ರಮುಖ ಕಟ್ಟಡಗಳಿಗೆ ಸೋಂಕು ನಿವಾರಕವನ್ನು ಸಿಂಪಡನೆ ಮಾಡಲಾಗುತ್ತಿದೆ ರಾಜ್ಯ ಸರಕಾರದ ಆದೇಶದಂತೆ ಜನತಾ ಕರ್ಪ್ಯೂನ್ನು ಗ್ರಾಮಗಳಲ್ಲಿ ಸಂಪೂರ್ಣವಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು, ಕೊರೊನೊ ಲಸಿಕೆ ಹಾಕಿಕೊಳ್ಳುವಂತೆ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸೋಂಕಿತರು ಹೆಚ್ಚು ಜನ ಇರುವ ಪ್ರದೇಶಗಳಲ್ಲಿ ಕಂಟೈನ್ ಮೆಂಟ್ ಜೋನ್‌ಗಳಾಗಿ ಮಾಡಿ ಅಲ್ಲಿನ ನಿವಾಸಿಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಸೂಕ್ತ ಔಷಧಿ ,ಹಾಗೂ ಮಾರ್ಗ ದರ್ಶನವನ್ನು ನಿರಂತರವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ, ರಾಕೇಶ್ ಮಾತನಾಡಿ, ಆರೋಗ್ಯ ಇಲಾಖೆಯ ನಿಯಮಗಳನ್ನು ಸಾರ್ವಜನಿಕರು ತಪ್ಪದೇ ಪಾಲನೆ ಮಾಡಬೇಕು ವಿನಾಕಾರಣ ಹೊರಗಡೆ ತಿರಗಾಡದೇ ಮನೆಯಲ್ಲಿ ಇದ್ದರೆ ಹೆಚ್ಚು ಒಳ್ಳೆಯದಾಗುತ್ತದೆ ಕೊರೊನೊ ಲಕ್ಷಣಗಳು ಕಂಡು ಬಂದ ಕೂಡಲೇ ರೋಗಿಗಳು ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಲ್ ಕಲೆಕ್ಟರ್ ಶ್ರೀನಿವಾಸ್, ಮೇಟಿ ನಾರಾಯಣಸ್ವಾಮಿ, ಆಂಜಿ, ಮತ್ತಿತರರು ಇದ್ದರು.