ಸೋಂಕು ತಡೆಗೆ ಅಗತ್ಯ ಸಲಹೆ-ಕ್ರಮ ಕೈಗೊಳ್ಳಿ: ಆಗ್ರಹ

ಬಂಟ್ವಾಳ , ಮೇ ೨- ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಜಿಲ್ಲಾಡಳಿತ ಹಲವು ಅಗತ್ಯ ಸಲಹೆ-ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೊ?ರ್ಸ್ ಸಮಿತಿ ಅಧ್ಯಕ್ಷ ಜೆ ಆರ್ ಲೋಬೊ, ಮಾಜಿ ಶಾಸಕ ಮೊಯ್ದೀನ್ ಬಾವಾ, ಮಾಜಿ ಮೇಯರ‍್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ, ಮಹಾಬಲ ಮಾರ್ಲ, ಪ್ರಮುಖರಾದ ಅಬ್ದುಲ್ ರವೂಫ್, ನವೀನ್ ಡಿಸೋಜಾ, ಮುಹಮ್ಮದ್ ಮೋನು, ಆರ್ ಕೆ ಪೃಥ್ವಿರಾಜ್, ಲುಕ್ಮಾನ್ ಬಿ ಸಿ ರೋಡು, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಶಾಹುಲ್ ಹಮೀದ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಸುರೇಂದ್ರ ಬಿ ಕಂಬಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಸದಾಶಿವ ಶೆಟ್ಟಿ, ಸದಾಶಿವ್ ಉಳ್ಳಾಲ್, ಎ ಸಿ ವಿನಯ್ ರಾಜ್, ನಝೀರ್ ಬಜಾಲ್, ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಕೆ, ಅನಿಲ್ ಕುಮಾರ್, ಶೋಭಾ ಪಡೀಲ್, ಇಕ್ಬಾಲ್ ಸೇಮನಿಗೆ, ಸಂತೋಷ್ ಕುಮಾರ್ ಶೆಟ್ಟಿ, ನೀರಜ್ ಚಂದ್ರ ಪಾಲ್, ಟಿ ಕೆ ಸುಧೀರ್, ಉದಯ ಕುಮಾರ್, ಟಿ ಹೊನ್ನಯ್ಯ, ಶುಭೋದಯ ಆಳ್ವ, ದುರ್ಗಾ ಪ್ರಸಾದ್, ಸುಹೈಲ್ ಕಂದಕ್, ಯೂಸುಫ್ ಉಚ್ಚಿಲ್, ಜೇಮ್ಸ್ ಶಿವಭಾಗ್, ಗಿರೀಶ್ ಶೆಟ್ಟಿ, ಜಯಶೀಲ ಅಡ್ಯಂತಾಯ, ಎಸ್ ಕೆ ಸೌಹಾನ್, ಸಲೀಂ ಅಹ್ಮದ್ ಮೊದಲಾದವರಿದ್ದರು.