ಸೋಂಕು ಚಿಕಿತ್ಸೆಗೆ ಹಾಸಿಗೆ ಮೀಸಲು ಒಪ್ಪಂದ


ಬೆಂಗಳೂರು, ಏ.೭- ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗಣನೀಯ ಏರಿಕೆ ಆಗುತ್ತೀರುವ ಹಿನ್ನೆಲೆ ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ಹಾಸಿಗೆ (ಬೆಡ್) ಮೀಸಲಿರಿಸಲು ಬಿಬಿಎಂಪಿ ಖಾಸಗಿ ಆಸ್ಪತ್ರೆಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಈ ಹಾಸಿಗೆಗಳ ನಿರ್ವಹಣೆಗಾಗಿ ಐಎಎಸ್ ಹಾಗೂ ಐಪಿಎಸ್ ದರ್ಜೆಯ ಅಧಿಕಾರಿಗಳನ್ನು ಒಳಗೊಂಡ ನೋಡಲ್ ಅಧಿಕಾರಿಗಳ ತಂಡವನ್ನು ನೇಮಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಯಾರಾರು?:ನಗರ ಪೂರ್ವ ವಲಯ ೧ – ಕ್ಯಾ. ಮಣಿವಣ್ಣನ್ ಹಾಗೂ ಅಲೋಕ್ ಕುಮಾರ್. ಪೂರ್ವ ವಲಯ ೨ – ಮಹಮ್ಮದ್ ಮೊಹಸೀನ್ ಹಾಗೂ ಹರಿಶೇಖರನ್. ಮಹದೇವಪುರ ವಲಯ – ಉಮಾ ಮಹದೇವನ್ ಹಾಗೂ ಸುನೀಲ್ ಅಗರ್‌ವಾಲ್. ಪಶ್ಚಿಮ ವಲಯ – ಎಂ.ಟಿ.ರೇಜು ಹಾಗೂ ಕೆ.ಟಿ.ಬಾಲಕೃಷ್ಣ.
ದಕ್ಷಿಣ ವಲಯ – ಬಗಾದಿ ಗೌತಮ್ ಹಾಗೂ ಡಾ.ರಾಮಚಂದ್ರ, ಆರ್.ಆರ್.ನಗರ ವಲಯ – ಡಾ.ವಿ.ರಾಮ್ ಪ್ರತಾಸ್ ಮನೋಹರನ್ ಹಾಗೂ ರಾಮ್ ನಿವಾಸ್ ಸೆಪಟ್. ಯಲಹಂಕ ವಲಯ – ಏಕ್‌ರೂಪ್ ಕೌರ್ ಹಾಗೂ ರೋಹಿಣಿ ಸೆಪಟ್ ಉಸ್ತುವಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.