ಸೋಂಕು ಕಡಿಮೆ ಸಾವು ಏರಿಕೆ

ನವದೆಹಲಿ,ಜು.೧೮- ಕಳೆದ ಒಂದು ವಾರದಿಂದ ೨೦ ಸಾವಿರಕ್ಕೂ ಅಧಿಕ ಸಂಖ್ಯೆಯ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು ಇದೀಗ ತುಸು ಕಡಿಮೆಯಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೬,೯೩೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೫೧ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ೧೬,೦೬೯ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸೋಂಕಿನ ಏರಿಳಿತ ಹಿನ್ನೆಲೆಯಲ್ಲಿ ದಿನದ ಪಾಸಿಟಿವಿಟಿ ಪ್ರಮಾಣ ಶೇ.೬.೪೮ಕ್ಕೆ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿದ್ದು ಸದ್ಯ ಈ ಸಂಖ್ಯೆ೧,೪೪ ೨೬೪ ಕ್ಕೆ ಹೆಚ್ಚಾಗಿದೆ ಎಂದು ತಿಳಿಸಿದೆ.

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಇದುವರೆಗೂ ಸೋಂಕಿನ ಒಟ್ಟಾರೆ ಸಂಖ್ಯೆ ೪.೩೫ ಕೋಟಿಗೆ ಏರಿಕೆಯಾಗಿದೆ.ಅಲ್ಲದೆ ಈವರೆಗೆ ಸೋಂಕಿನಿಂದ ಚೇತರಿಕೆ ಪ್ರಮಾಣ ೪,೩೦,೯೭,೫೧೦ ಕ್ಕೆ ಏರಿಕೆಯಾಗಿದೆ.ಇದೇ ವೇಳೆ ೫,೨೫,೭೬೦ ಮಂದಿಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

೨೦೦ ಕೋಟಿ ಡೋಸ್ ಲಸಿಕೆ:

ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪,೪೬,೬೭೧ ಡೋಸ್ ಲಸಿಕೆ ಹಾಕಲಾಗಿದೆ. ಇದರೊಂದಿಗೆ ೨೦೦,೦೪,೬೧,೦೯೫ ಡೋಸ್ ಲಸಿಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ

ದಿನದ ಪಾಸಿಟಿವಿಟಿ ಪ್ರಮಾಣ ಶೇ.೬.೪೮ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೫೮ ರಷ್ಟು ಇದೆ. ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ. ೦.೩೩ ಕ್ಕೆ ಹೆಚ್ಚಾಗಿದೆ .

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨,೬೧,೪೭೦ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಿದ್ದು ೮೬.೯೬ ಕೋಟಿಗೆ ಏರಿಕೆಯಾಗಿದೆ.ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ಶೇ. ೯೮.೪೭ಕ್ಕೆ ಕುಸಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.