ಸೋಂಕು ಏರಿಳಿತ ಆತಂಕ

ನವದೆಹಲಿ,ನ.೨೫- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನನಿತ್ಯ ಹಾವು ಏಣಿ ಆಟ ಆಡುತ್ತಿದೆ. ಇದರಿಂದಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ದೇಶದಲ್ಲಿ ನಿನ್ನೆ ದಾಖಲಾಗಿದ್ದ ಸೋಂಕು ಸಂಖ್ಯೆಗಿಂತ ಇಂದು ತುಸು ಕಡಿಮೆ ಸೋಂಕು ದೃಢಪಟ್ಟಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೯೧೧೯ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೩೯೬ ಮುಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಜೊತೆಗೆ ಹೊಸದಾಗಿ ೧೦,೨೬೪ ಮಲ್ಲಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ದೇಶದಲ್ಲಿ ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ಒಟ್ಟಾರೆಯಾಗಿ ಸೋಂಕಿನ ಸಂಖ್ಯೆ ೩,೪೫,೩೫,೭೬೩ ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಇಲ್ಲಿಯತನಕ ಮೃತಪಟ್ಟವರ ಒಟ್ಟು ಸಂಖ್ಯೆ ೪,೬೬,೫೮೪ ಹೆಚ್ಚಳವಾಗಿದೆ.

ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಒಟ್ಡು ಸಂಖ್ಯೆ ೩,೩೯,೬೭,೯೬೨ ಮಂಡಿಗೆ ಏರಿಕೆಯಾಗಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ

ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಸೋಂಕು ಸಂಖ್ಯೆಗಿಂತ ಚೇತರಿಕೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ.

೫೩೯ ದಿನಗಳ ಬಳಿಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೦೯,೯೪೦ ಮಂದಿಯಲ್ಲಿ ಇದೆ ಕಳೆದ ಹಲವು ದಿನಗಳಿಂದ ಈ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನೆನ್ನೆ ಸಂಜೆಯತನಕ ೧೧೯.೩೮ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಪ್ರಮಾಣ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚು ಮಾಡಲಾಗುತ್ತದೆ. ಅಲ್ಲದೆ ಇರುವರೆಗೂ ೬೩.೫೯ ಕೋಟಿ ಜನರಿಗೆ ಕೊಡುವವರನ್ನು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಚೇತರಿಕೆ ಮತ್ತಷ್ಟು ಏರಿಕೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೋರೋನಾ ಸೋಂಕಿನ ಚೇತರಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ ಸದ್ಯ ಪ್ರಮಾಣ ಶೇ.೯೮.೩೩ ರಷ್ಟು ಮನೆಯಲ್ಲಿ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊರೋನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೦.೭೯ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೯೦ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ