ಸೋಂಕು ಏರಿಕೆ ಆತಂಕ

ನವದೆಹಲಿ,ಏ.೧೬- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.ಸತತ ನಾಲ್ಕನೇ ದಿನವೂ ೧೦ ಸಾವಿರಕ್ಕಿಂತ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ೨೬ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಸೋಂಕಿನ ಭೀಕರತೆ ಹೆಚ್ಚುತ್ತಿರುವುದಕ್ಕೆ ನಿದರ್ಶನವಾಗಿದೆ.
ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ ಐದು ಮಂದಿ.ಮಹಾರಾಷ್ಟ್ರ ನಾಲ್ಕು ಮಂದಿ,ರಾಜಸ್ಥಾನ ಮೂರು ಮಂದಿ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರಪ್ರದೇಶ ತಲಾ ಒಂದು ಸಾವು ಕಂಡಿವೆ. ಇದರ ಜೊತೆಗೆ, ಕೇರಳ ಆರು ಸಾವುಗಳನ್ನು ಒಟ್ಟು ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.ದೇಶದಲ್ಲಿ ನಾಲ್ಕನೇ ದಿನವೂ ೧೦ ಸಾವಿರ ಗಡಿ ದಾಟಿ ಸೋಂಕು ಕಾಣಿಸಿಕೊಂಡಿದೆ.ನಿನ್ನೆ ೧೦,೭೫೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಂದು ೧೦,೦೮೯ ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೫೭,೫೪೨ಕ್ಕೆ ಏರಿಕೆಯಾಗಿದೆ.ಕಳೆದ ಹಲವು ದಿನಗಳಿಂದ ಇಳಿಕೆಯಾಗಿದ್ದ ಕೊರೊನಾ ಸೋಂಕು ಕಳೆದ ಎರಡು ದಿನಗಳಿಂದ ಏರಿಳಿತವಾಗಿತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆತಂಕಕ್ಕೆ ಎಡೆ ಮಾಡಿದೆಕಳೆದ ೨೪ ಗಂಟೆಯ ಅವಧಿಗಳಲ್ಲಿ ೧೦,೦೮೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ೫೭,೫೪೨ ದಾಟಿದೆ . ಎಂದು ಸಚಿವಾಲಯ ತಿಳಿಸಿದೆ.
೪,೪೨,೨೩,೨೧೧ ಸೋಂಕಿನಿಂದ ಹೊಸದಾಗಿ ೬ ಸಾವಿರಕ್ಕೂ ಮಂದಿ ಚೇತರಿಸಿಕೊಂಡಿದ್ದು ಚೇತರಿಕೆಯ ಒಟ್ಟು ಸಂಖ್ಯೆ ೪,೪೨,೨೩,೨೧೧ಕ್ಕೆ ಏರಿಕೆಯಾಗಿದ್ದು ಇಲ್ಲಿಯವರೆಗೆ ಕೊರೋನಾ ಸೋಂಕು ಸಂಖ್ಯೆ ೪,೪೮,೦೮,೦೨೨ ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೦.೧೨ ಕ್ಕೆ ಹೆಚ್ಚಳವಾಗಿದೆ.ಸೋಂಕಿನಿಂದ ಇಲ್ಲಿಯ ತನಕ ೫,೩೧,೦೭೬ ಮಂದಿ ಸಾವನ್ನಪ್ಪಿದ್ದು ಸಾವಿನ ಪ್ರತಿಶತ ಪ್ರಮಾಣ ಶೇ.೧.೧೯ ರಷ್ಟು ಇದೆ. ಎಂದು ಹೇಳಿದೆ.ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೬೮ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೦.೧೨ ರಷ್ಟು ಇದ್ದು ದಿನದ ಪಾಸಿಟಿವಿಟಿ ಪ್ರಮಾಣ ಶೇ೬.೭೮ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ,ಶೇ.೪.೪೯ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.