ಸೋಂಕು ಎರಡನೇ ಅಲೆ ತಡೆಗೆ ಕೋವಿಡ್ ನಿಯಮ ಪಾಲಿಸಲು ಐಸಿಎಂಅರ್ ಸಲಹೆ

ನವದೆಹಲಿ,ಮಾ 19- ಕೊರೊನಾ ಎರಡನೇ ಅಲೆ ಎದುರಿಸಿ ಅದರಿಂದ‌ ಹೊರಬರಲು ಕೋವಿಡ್ ನಿಯಾಮವಳಿಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದ‌ ಅಖಿಲ ಭಾರತ ವೈದ್ಯಕೀಯ ಸಂಘ (ಐಸಿಎಂಅರ್) ಸಲಹೆ ಮಾಡಿದೆ.

ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಕೋವಿಡ್-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಅದರಿಂದ ಹೊರಬರಲು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಐಸಿಎಂಆರ್ ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಕೆಲ ವ್ಯಕ್ತಿಗಳು ಮತ್ತು ಸಂಸ್ಛೆಗಳು ಕೋವಿಡ್ ಗೆ ಔಷಧಿ ಎಂದು ಪ್ರಚಾರ ನಡೆಸುತ್ತಿವೆ. ಆದರೆ ಇಂತಹ ಜಾಲಕ್ಕೆ ಸಿಲುಕಬೇಡಿ.. ಕೊರೋನಾ ಚಿಕಿತ್ಸೆಗೆ ಸೂಕ್ತ ನಿಯಾಮಾವಳಿಯಲ್ಲೇ ಚಿಕಿತ್ಸೆ ಪಡೆಯುವಂತೆ ಐಸಿಎಂಆರ್ ಸಲಹೆ ಮಾಡಿದೆ.

ಕೆಲವು ಔಷಧಿ ಮತ್ತು ಕಾರ್ಯವಿಧಾನಗಳ ವೈಜ್ಞಾನಿಕ ಸ್ವಾರ್ಥ ಕೇಂದ್ರಿತ ಪ್ರಚಾರಕ್ಕೆ ಬಲಿಯಾಗದೆ ಹೆಚ್ಚು ಸಮರ್ಪಿತ ಪರೀಕ್ಷೆಯೊಂದಿಗೆ, ಪತ್ತೆ ಹಚ್ಚಲು ಮತ್ತು ಚಿಕಿತ್ಸೆಗಾಗಿ ಸೂಕ್ತವಾದ ಶಿಷ್ಟಾಚಾರವನ್ನು ಮುಂದುವರಿಸಬೇಕು. ಲಸಿಕೆಯನ್ನು ತ್ವರಿತವಾಗಿ ತೆಗೆದುಕೊಳ್ಳುವಂತೆ ಐಎಂಎ ಸೂಚನೆ ನೀಡಿದೆ.

ಆರೋಗ್ಯ ಸಿಬ್ಬಂದಿ ಮತ್ತು ಕೋವಿಡ್ ವಾರಿಯರ್ಸ್ ಗೂ ಸೂಚನೆ ನೀಡಿದ್ದು, ಹೆಚ್ಚೆಚ್ಚು ಪರೀಕ್ಷೆ, ಸೋಂಕಿತರ ಸಂಪರ್ಕ ಪತ್ತೆ ಮತ್ತು ತುರ್ತಾಗಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.

ಮುಂಬರುವ ಚುನಾವಣೆಗಳ ಮೇಲೂ ಕಣ್ಣಿಟ್ಟಿರುವ ಐಎಂಎ, ಚುನಾವಣಾ ಪ್ರಚಾರಗಳಲ್ಲಿ ಅತೀವ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಪ್ರಚಾರದ ವೇಳೆ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಈ ವೇಳೆ ಸೋಂಕು ಹರಡುವುದನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆಯೇ ಐಎಂಎ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದೆ.

ಚುನಾವಣಾ ಪ್ರಚಾರದ ವೇಳೆ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಉತ್ತಮ ಗಾಳಿ ಇರುವ ಕೋಣೆಗಳು, ನಿರಂತರ ಅಥವಾ ಭೌತಿಕ ನಿರ್ಬಂಧಗಳ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚಿನ ಕಾಳಜಿ ವಹಿಸಬೇಕು. ಶಾಲೆಗಳು ಮತ್ತು ಮತದಾನ ಕೇಂದ್ರಗಳಲ್ಲಿ ನಿರಂತರ ಸ್ಯಾನಿಟೈಜೇಷನ್ ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದೆ.

ಈ ಸೋಂಕಿಗೆ ಚಿಕಿತ್ಸೆ ನೀಡಲು ದೇಶ ಬದ್ಧವಾಗಿದ್ದು, ಹೆದರಿಕೆ ಬೇಡ.. ಆದರೆ ಮುನ್ನೆಚ್ಚರಿಕೆ ವಹಿಸಿ. ಅನಗತ್ಯ ಪ್ರಯಾಣವನ್ನು ನಿಯಂತ್ರಿಸಿ. ಸಾರ್ವಜನಿಕ ಕೂಟಗಳಿಂದ ಸಾಧ್ಯವಾದಷ್ಟೂ ದೂರವಿರಿ.. ಸೋಂಕು ಖಚಿತವಾಗಿದ್ದರೆ ಗೊತ್ತು ಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದೆ.