ಸೋಂಕು ಉಲ್ಬಣ ಹರಿದ್ವಾರದಲ್ಲಿ ಕುಂಭಮೇಳಕ್ಕೆ ತೆರೆ

ನವದೆಹಲಿ, ಏ. 17- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿದ್ದ ಕುಂಭ ಮೇಳಕ್ಕೆ ತೆರೆ ಎಳೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಸಾಂಕೇತಿಕವಾಗಿ ಆಚರಿಸುವಂತೆ ಮನವಿ ಮಾಡಿದ್ದರಿಂದ ಕುಂಭಮೇಳಕ್ಕೆ ತೆರೆ ಎಳೆದಿರುವುದಾಗಿ ಜುನಾ ಅಖಾಡ ಸ್ವಾಮಿ ಅವದೇಶಾನಂದ ಸ್ವಾಮಿ ಇಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ದ ಜನರು, ಅವರ ಜೀವದ ರಕ್ಷಣೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹರಡುತ್ತಿದೆ ಈ ಹಿನ್ನಲೆಯಲ್ಲಿ ವಿಧಿವತ್ತಾಗಿ ಕುಂಭಕ್ಕೆ ಆಹ್ವಾನಿಸಲಾಗಿದ್ದ ಎಲ್ಲ ದೇವತೆಗಳನ್ನು ವಿಸರ್ಜಿಸಲಾಗಿದೆ. ಜುನಾ ಅಖಾಡದ ವತಿಯಿಂದ ಕುಂಭಮೇಳವನ್ನು ಸಮಾರೋಪಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕುಂಭಮೇಳದಲ್ಲಿ ಲಕ್ಚಾಂತರ ಜನರು ಭಾಗವಹಿಸಿದ್ದರು. ಆದರೆ 1700 ಕ್ಕೂ ಮಂದಿಗೆ ಕೊರೊನಾ ಸೋಂಕು ತಗುಲಿತ್ತು.