ಸೋಂಕು ಇಳಿಕೆ ದೇಶ ತುಸುನಿರಾಳ

ನವದೆಹಲಿ, ನ ೧೨- ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಒಟ್ಟಾರೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೫ ಲಕ್ಷಕ್ಕೂ ಕಡಿಮೆ ಇದೆ.
ಇದುವರೆಗೂ ೮೬.೮೩ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೮೦.೬೬ ಲಕ್ಷ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ೪.೮೯ ಲಕ್ಷ ಸಕ್ರಿಯ ಪ್ರಕರಣಗಳಿವೆ.
ಅತಿಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರ, ಉತ್ತರ ಖಂಡ್, ಮಣಿಪುರ, ಮಿಜೊರಾಂ, ತ್ರಿಪುರ, ಮೇಘಾಲಯ ಮತ್ತು ಗೋವಾ ಸೇರಿದಂತೆ, ೭ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ, ಸೂಚನೆ ನೀಡಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸೊಂಕು ತಡೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
೪೭,೯೦೫ ಹೊಸಪ್ರಕರಣಗಳು
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪೭,೯೦೫ ಹೊಸಪ್ರಕರಣಗಳು ದಾಖಲಾಗಿದ್ದು, ೫೫೦ ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೧,೨೮,೧೨೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ೮೬,೮೩,೯೧೬ ಮಂದಿಗೆ ಸೊಂಕು ತಗುಲಿದ್ದು, ಈ ಪೈಕಿ ೮೦,೬೬,೫೦೧ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಇದುವರೆಗೂ ೧೨,೧೯,೬೨,೫೦೯ ಮಂದಿಗೆ ಕೊರೊನಾ ಸೋಂಕಿನ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧೧,೯೩,೩೫೮ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಚೇತರಿಕೆ ಪ್ರಮಾಣ ಅಧಿಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ. ೯೨.೭೯ ರಷ್ಟಿದೆ.
ಆಗಸ್ಟ್ ೭ರ ತನಕ ದೇಶದಲ್ಲಿ ೨೦ ಲಕ್ಷದಷ್ಟಿದ್ದ ದೇಶದ ಕೊರೊನಾ ಸೋಂಕಿನ ಪ್ರಮಾಣ ಆಗಸ್ಟ್ ೨೩ರ ವೇಳಗೆ ೩೦ ಲಕ್ಷ ದಾಟಿತ್ತು. ಸೆ. ೫ರ ವೇಳೆಗೆ ೪೦ ಲಕ್ಷ ದಾಟಿತ್ತು. ಸೆ. ೧೬ಕ್ಕೆ ೫೦ ಲಕ್ಷ, ಸೆ. ೨೮ಕ್ಕೆ ೬೦ ಲಕ್ಷ, ಅಕ್ಟೋಬರ್ ೧೧ಕ್ಕೆ ೭೦ ಲಕ್ಷ, ಅ. ೨೯ಕ್ಕೆ ೮೦ ಲಕ್ಷ ಸೋಂಕು ದಾಟಿದೆ.

:=>