ಸೋಂಕಿನ ಸುನಾಮಿ ಭಾರತಕ್ಕೆ ಅಪಾಯ: ತಜ್ಞರ ಎಚ್ಚರಿಕೆ


ನವದೆಹಲಿ, ಏ. ೨೫: ಕೊರೊನಾ ವೈರಸ್ ಎರಡನೇ ಅಲೆಯ ದೇಶವನ್ನು ವಿನಾಶಕಾರಿ ಬಿಕ್ಕಟ್ಟಿಗೆ ತಂದೊಡ್ಡುತ್ತಿದೆ. ಇಡೀ ದೇಶವನ್ನು ಸಾವಿನ ಮನೆಯನ್ನಾಗಿಸುತ್ತಿದೆ.
ಆಸ್ಪತ್ರೆಗಳಲ್ಲಿ ಸೋಂಕಿತರ ಹಾಹಾಕಾರ ಮುಗಿಲುಬಿಟ್ಟಿದೆ. ಜೀವರಕ್ಷಕ ಆಮ್ಲಜನಕ ಪೂರೈಕೆ ಕಡಿತಗೊಂಡಿದೆ. ಚಿಕಿತ್ಸೆಗಾಗಿ ವೈದ್ಯರನ್ನು ಜನರು ಅಂಗಲಾಚುತ್ತಿದ್ದಾರೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಗಮನಾರ್ಹ ಸಂಗತಿ ಎಂದರೆ ಅಧಿಕೃತವಾಗಿ ವರದಿಯಾಗಿರುವುದಕ್ಕಿಂತ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಪ್ರತಿದಿನ, ಸರ್ಕಾರ ೩ ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತರನ್ನು ದಾಖಲಿಸುತ್ತಿದೆ. ಇದು ವಿಶ್ವದಲ್ಲೇ ಭಾರತದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲೆಯಾಗುತ್ತಿವೆ. ಜಾಗತಿಕವಾಗಿ ಸೋಂಕು ಏರಿಕೆಯಲ್ಲಿ ಇಡೀ ವಿಶ್ವದ ಅರ್ಧದಷ್ಟು ಪ್ರಕರಣಗಳು ಭಾರತದಲ್ಲಿ ಕಂಡುಬರುತ್ತಿವೆ.
ಸೋಂಕಿನ ಪ್ರಮಾಣ ಗಮನಿಸಿ ತಜ್ಞರು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚತ್ತಾ ಹೋದರೆ, ಮುಂದಿನ ಕೆಲ ದಿನಗಳಲ್ಲೇ ಭಾರತ ಭಾರೀ ಅಪಾಯವನ್ನು ತೊಂದೊಡ್ಡಿಕೊಳ್ಳಬಹುದು ಎಂದು ತಜ್ಱರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಎಲ್ಲೆಡೆ ವ್ಯಾಪಿಸಿರುವುದರಿಂದ ಲಕ್ಷಾಂತರ ಜನರು ಮನೆಯಿಂದ ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ವೈರಸ್ ಭಾರೀ ಅಪಾಯವನ್ನು ತಂದೊಡ್ಡಿದೆ. ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಆಕ್ಸಿಜನ್ ಇಲ್ಲದೆ ರೋಗಿಗಳು ಏದುಸಿರು ಬಿಡುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಹಠಾತ್ ಏರಿಕೆ, ಒಂದು ರೀತಿ ಕಪಟವೇ ಎನ್ನುವಂತೆ ಜನರಲ್ಲಿ ಭಾಸವಾಗುತ್ತಿದೆ. ದೇಶದಲ್ಲಿ ಅಧಿಕೃತವಾಗಿ ಕೋವಿಡ್ ಸಾವಿನ ಸಂಖ್ಯೆ ಸುಮಾರು ೨ ಲಕ್ಷ . ಪ್ರತಿದಿನ ೨ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರದ ಅಂಕಿಅಂಶಗಳಿಗಿಂತ ಹೆಚ್ಚಾಗಿ ಜನರು ಸಾಯುತ್ತಿದ್ದಾರೆ.
ದೇಶಾದ್ಯಂತ ಚಿತಾಗಾರಗಳು ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತಿವೆ. ಶವಗಳು ಶವಸಂಸ್ಕಾರಕ್ಕಾಗಿ ಸಾಲುಗಟ್ಟಿವೆ. ಅಷ್ಟೇ ಅಲ್ಲದೆ, ಕೆಲವೆಡೆ ಬಯಲುಗಳಲ್ಲೇ ದಹನಕ್ರಿಯೆ ಮಾಡಲಾಗುತ್ತಿದೆ. ಈಗ ಸೋಂಕಿತರ ಮತ್ತು ಮೃತಪಟ್ಟರ ಸಂಖ್ಯೆಗೂ ತಾಳೆಯೇ ಆಗುತ್ತಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ .ದೇಶದಲ್ಲಿ ೧.೪ ಬಿಲಿಯನ್ ಗೂ ಹೆಚ್ಚು ಜನರು ಕೋವಿಡ್ ಪೀಡಿತರಿದ್ದಾರೆಂದು ಹೇಳಲಾಗಿದೆ.