ಸೋಂಕಿನ ಕೊಂಡಿ ಕಳಚುವ ದಿಸೆಯಲ್ಲಿ ಸೂಕ್ತ ಕ್ರಮ ಜರುಗಿಸಿ

ಹನೂರು:ಏ:04: ಸರ್ಕಾರದ ಗೈಡ್‍ಲೈನ್ ಇಲ್ಲ ಅನ್ನುವುದನ್ನು ಬಿಟ್ಟು ಕೊರೊನಾ ಸೋಂಕಿನ ಕೊಂಡಿಯನ್ನು ಕಳಚುವ ದಿಸೆಯಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕ್ರಮ ವಹಿಸಿ ಎಂದು ಶಾಸಕ ಆರ್.ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕೊವಿಡ್-19 ತಡೆಗಟ್ಟುವ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕೊರೊನಾ ಸೋಂಕಿನ ಕೊಂಡಿಯನ್ನು ಕಳಚದೇ ಹೊರತು ಸೋಂಕನ್ನು ತಹಬದಿಗೆ ತರಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಸೋಂ ಕಿತ ವ್ಯಕ್ತಿಗಳ ಮನೆ ಸುತ್ತ ಯಾರು ಹೊರ ಬಾರದಂತೆ ಟೇಪ್ ಅಳವಡಿಸುವುದು ಹಾಗೂ ಕಂಟೈನ್‍ಮೆಂಟ್ ಜೋನ್ ಎಂದು ಅರಿವು ಮೂಡಿ ಸುವ ಫಲಕಗಳನ್ನು ಅಳವಡಿಸುವ ಕೆಲಸವನ್ನು ಮಾಡ ಬೇಕು. ಸೋಂಕಿತರು ಹೊರ ಬಾರದಂತೆ ಆಹಾರ ಪದಾರ್ಥಗಳನ್ನು ಸ್ಥಳಿಯ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದ ಅವರು ಅನಗತ್ಯವಾಗಿ ವಾಹನಗಳು ಓಡಾಡುತ್ತಿದ್ದ ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ದಂಡ ವಿಧಿಸುವುದು ಸೇರಿದಂತೆ ಒಂದೆರಡು ದಿನಗಳ ಮಟ್ಟಿಗೆ ವಾಹನವನ್ನು ಜಪ್ತಿ ಮಾಡುವ ಮೂಲಕ ಎಚ್ಚರಿಕೆ ನೀಡಬೇಕು ಎಂದರು.
ಸಭೆಯಲ್ಲಿ ವೈದ್ಯಾಧಿಕಾರಿ ಡಾ.ಪ್ರಕಾಶ್ ಅವರಿಂದ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆದರು. ನೂತನವಾಗಿ ಕೊರೊನಾ ಸೋಂಕಿತರಿಗೆ ಕೇಂದ್ರಗಳನ್ನು ತೆರೆಯುವುದಾದರೆ ಇಲ್ಲಿಗೆ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಉಂಟಾಗುವುದಿಲ್ಲವೇ ಎಂದು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ವೈದ್ಯಾಧಿಕಾರಿ ಪ್ರಕಾಶ್, ಬಿ.ಎಸ್. ಇ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಸಂಪನ್ಮೂಲಗಳಿಂದ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಪಟ್ಟಣದಲ್ಲಿ ಕೊವಿಡ್ ಸಂಬಂಧ ಮುಂಜಾಗ್ರತ ಕ್ರಮಗಳ ಬಗ್ಗೆ ಪ.ಪಂ.ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಪೊಲೀಸ್ ಚೌಕಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಸೆಡ್ ನಿರ್ಮಾಣ ಹಾಗೂ ಕುಡಿಯುವ ನೀರನ್ನು ಒದಗಿಸಲು ಕ್ರಮ ವಹಿಸ ಬೇಕೆಂದು ಶಾಸಕರು ಪ.ಪಂ.ಮೂರ್ತಿಗೆ ತಿಳಿಸಿ ದರು. ತುರ್ತು ಸಮಯಗಳಲ್ಲಿ ವಾಹನ ಸೌಲಭ್ಯ, ವೆಂಟಿಲೇಟರ್, ವ್ಯಾಕ್ಸಿನ್ ಲಸಿಕೆ ಇನ್ನಿತರೆ ವಿಚಾ ರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ತಹಶೀಲ್ದಾರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ತಾ.ಪಂ.ಸಹಾಯಕ ನಿರ್ದೇಶಕ ಮಹಾದೇವಸ್ವಾಮಿ, ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್, ಸಿಬ್ಬಂದಿ ರಾಘವೇಂದ್ರ ಇದ್ದರು.