ಸೋಂಕಿನಿಂದ ಲಿಂಗಪ್ಪ ಲಿಂಗೈಕ್ಯ

ಹನೂರು:ಏ.30: ಮರಳೆಗವಿ ಮಠದಲ್ಲಿ 35 ವರ್ಷಗಳ ಕಾಲ ಸುದೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಲಿಂಗಪ್ಪ ಅವರು ಕರೋನಾ ಸೋಂಕಿನಿಂದ ಲಿಂಗೈಕ್ಯರಾಗಿದ್ದಾರೆ.
ಅವರ ಅಂತ್ಯ ಸಂಸ್ಕಾರವನ್ನು ಮಂಗಲ ಗ್ರಾ.ಪಂ. ವ್ಯಾಪ್ತಿಯ ಆನಾಪುರ ಗ್ರಾಮದಲ್ಲಿ ಕೋವಿಡ್ ನಿಯಮಾನುಸಾರ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.
ಕೋವಿಡ್‍ನಿಂದ ಮೃತಪಟ್ಟ ಹಿನ್ನಲೆಯಲ್ಲಿಅಂತ್ಯ ಸಂಸ್ಕಾರವನ್ನು ಪಿ.ಪಿ.ಕಿಟ್, ಮಾಸ್ಕ್, ಸ್ಯಾನಿಟೈಸರ್, ಕೈಗವುಸು ಸೇರಿದಂತೆ ಅಗತ್ಯ ಮುಂಜಾಗ್ರತ ಕ್ರಮಗಳೊಂದಿಗೆ ನಡೆಸಲಾಗಿದ್ದು, ಈ ಕಾರ್ಯದಲ್ಲಿ ಬಿಜೆಪಿ ಜಿಲ್ಲಾಯುವ ಮೋರ್ಚಾ ಉಪಾಧ್ಯಕ್ಷರು ಹಾಗೂ ಕರ್ನಾಟಕ ಬಸವ ಕೇಂದ್ರ ಹನೂರು ತಾಲ್ಲೂಕು ಘಟಕದ ಅಧ್ಯಕ್ಷ ವೃಷಭೇಂದ್ರಸ್ವಾಮಿ, ತಾಲ್ಲೂಕು ಮಾಧ್ಯಮ ಪ್ರಮುಖ ಕಾಮಗೆರೆ ಮಧು, ಮುಖಂಡರಾದ ಟೈಲರ್ ಗುರುಸ್ವಾಮಿ, ಆನಾಪುರಚಂದನ್, ಮೃತರ ಪುತ್ರರಾದ ನಾಗಭೂಷಣ ಶಿವಪ್ರಸಾದ್ ನೆರವೇರಿಸಿದರು.