ಸೋಂಕಿನಿಂದ ಮೃತಪಟ್ಟ ಮನೆಗೆ ಎಸ್.ಟಿ ಸೋಮಶೇಖರ್ ಭೇಟಿ

ಬೆಟ್ಟದಪುರ: ಜೂ.06: ಸಮೀಪದ ಕಣಗಾಲು ಗ್ರಾಮದಲ್ಲಿ ಒಂದೆ ಕುಟುಂಬದ ದಂಪತಿಗಳು ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಸಚಿವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಮೀಪದ ಕಣಗಾಲು ಗ್ರಾಮದಲ್ಲಿ ಒಂದೆ ಕುಟುಂಬದ ದಂಪತಿಗಳು ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತನ ಸಹೋದರ ತಿಮ್ಮೇಗೌಡ ಸಚಿವರೊಂದಿಗೆ ಮಾತನಾಡಿ ಕೊರೊನಾ ಸೋಂಕು ತಗುಲಿ ಅಣ್ಣ ಮತ್ತು ಅತ್ತಿಗೆಯನ್ನು ಕಳೆದುಕೊಂಡಿದ್ದೇವೆ ನಮ್ಮ ಕುಟುಂಬ ಸೂತಕ ಛಾಯೆ ಇರುವಾಗ ಆರೋಗ್ಯ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಧೈರ್ಯ ತುಂಬುವ ಕೆಲಸ ಮಾಡದಿರುವುದು ನಮ್ಮನ್ನು ಮತ್ತಷ್ಟು ಕುಗ್ಗಿಸುವ ಸ್ಥಿತಿ ಉಂಟಾಗಿತ್ತು ನಮಗೆ ಯಾವುದೇ ಪರಿಹಾರ ಬೇಡ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕುಟುಂಬಸ್ಥರಿಗೆ ಸಮಾಧಾನಪಡಿಸಿ ಸಹಕಾರ ಸಂಸ್ಥೆಯಲ್ಲಿ ತಮ್ಮೇಗೌಡ ರವರ ಮಗಳಿಗೆ ಉದ್ಯೋಗ ನೀಡುವುದಾಗಿ ಹಾಗೂ ಅವರ ಅಳಿಯನಿಗೆ ಪಿರಿಯಾಪಟ್ಟಣ ಸಾರಿಗೆ ಘಟಕಕ್ಕೆ ವರ್ಗಾಯಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಕುರಿತು ಪತ್ರಿಕೆಗಳಲ್ಲಿ ಜೂನ್ 4 ರಂದು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಅಸಮಾಧಾನ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಶಾಸಕ ಕೆ.ಮಹದೇವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.