ಸೋಂಕಿನಿಂದ ತಂದೆ ತಾಯಿ ಸಾವು:ಅನಾಥ ಮಕ್ಕಳಿಗೆ ಮಾಸಿಕ 3,500 ರೂ ಘೋಷಣೆ

ಬೆಂಗಳೂರು, ಮೇ 29-ಕೊರೊನಾ ಸೋಂಕಿನಿಂದ ತಂದೆ-ತಾಯಿ ಮೃತರಾಗಿ ಅನಾಥರಾಗುವ ಮಕ್ಕಳ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ತಿಂಗಳಿಗೆ 3500 ರೂ ನೀಡುವುದಾಗಿ‌ ಪ್ರಕಟಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಈ ವಿಷಯ ತಿಳಿಸಿದರು.
ಅನಾಥ ಮಕ್ಕಳಿಗೆ ಬಾಲಸೇನಾ ಯೋಜನೆ ಆರಂಭಿಸಲಾಗುತ್ತದೆ. ತಂದೆ-ತಾಯಿ, ಏಕ ಪೋಷಕರು, ಕಾನೂನು ಪೋಷಕರನ್ನು ಕಳೆದು ಕೊಂಡ ಮಕ್ಕಳಿಗೆ ವಿವಿಧ ನೆರವು ಘೋಷಿಸಿದರು.
ಪೋಷಕರು ಇಲ್ಲದ ಮಕ್ಕಳನ್ನು ನೊಂದಾಯಿತ ಮಕ್ಕಳ ಪಾಲನಾ ಕೇಂದ್ರಗಳಿಗೆ ದಾಖಲಿಸಿ ಆರೈಕೆ ಮಾಡಲಾಗುತ್ತದೆ ಎಂದ ಅವರು,
ಅನಾಥ ಮಕ್ಕಳಿಗೆ ಕಿತ್ತೂರು ಚೆನ್ನಮ್ಮ, ಮೊರಾರ್ಜಿ ದೇಸಾಯಿಗಳಂಥ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಹತ್ತನೇ ತರಗತಿ ಮುಗಿಸಿದ ಮಕ್ಳಳ ಕೌಶಲ್ಯಾಭಿವೃದ್ಧಿ ಅಥವಾ ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್ ಟಾಪ್ ವಿತರಿಸುವುದಾಗಿ ಹೇಳಿದರು.
21 ವರ್ಷ ಮೇಲ್ಪಟ್ಟ ಹೆಣ್ಣುಮಕ್ಳಳ ಮದುವೆ ಅಥವಾ ಉನ್ನತ ಶಿಕ್ಷಣಕ್ಕೆ 1 ಲಕ್ಷ ರೂ ಸಹಾಯ ಧನದ ನೆರವು ಘೋಷಿಸಿದರು. ಕೋವಿಡ್ ನಿಂದ ಅನಾಥವಾದ ಮಗುವಿಗೆ ತಲಾ ಒಬ್ಬ ಮಾರ್ಗದರ್ಶಿ ನೇಮಿಸಿ ಎಲ್ಲ ನೆರವು ನೀಡುವುದಾಗಿ ಘೋಷಿಸಿದರು.