ಸೋಂಕಿನಿಂದ ಗುಣಮುಖರಿಗೆ ಬಿಡುಗಡೆ

????????????????????????????????????
ಸಂಜೆವಾಣಿ ವಾರ್ಥೆ
ಸಿರುಗುಪ್ಪ  ಜ 15 : ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19ನ ಮೂರನೇ ಅಲೆಯ ಕರೋನಾ ಸೋಂಕಿನಿಂದ ಗುಣಮುಖರಾದ ರೋಗಿಗಳನ್ನು ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ನೇತೃತ್ವದಲ್ಲಿ ಹೂವು ಎರಚುವ ಮೂಲಕ ಬಿಡುಗಡೆ ಪತ್ರ ನೀಡಿ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ಅವರು ತಾಲೂಕಿನ ಸಾರ್ವಜನಿಕರು ಕರೋನಾ ರೂಪಾಂತರ ಮೂರನೇ ಅಲೆಯು ಕನಿಷ್ಠ ಎರಡು ತಿಂಗಳ ಕಾಲ ಇರುವ ಕಾರಣ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಪಾಲಿಸುತ್ತ, ಪ್ರತಿಯೊಬ್ಬರು ಕೋವಿಡ್ ತಡೆಯುವ ಲಸಿಕೆಗಳನ್ನು ಹಾಕಿಸಿಕೊಂಡು ಇನ್ನೊಬ್ಬರಿಗೆ ಹಾಕಿಸುವ ಮೂಲಕ ಜಾಗೃತೆಯಿಂದ ಕರೋನಾ ಮೂರನೇ ಅಲೆಯನ್ನು ಹಿಮ್ಮೆಟಲು ಸಾಧ್ಯವಾಗುತ್ತದೆಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ಮಾತನಾಡಿ ಮೂರನೇ ಅಲೆಯ ಪ್ರಾರಂಭವಾಗಿರುವುದರಿಂದ ನಮ್ಮ ತಾಲೂಕಿನಲ್ಲಿ ಒಟ್ಟು 57 ಸೋಂಕಿತರು ದಾಖಲಾಗಿದ್ದು, 39 ಸೋಂಕಿತರು ನಮ್ಮ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 3 ಸೋಂಕಿತರು ಹೆಚ್ಚಿನ ಚಿಕಿತ್ಸೆಯನ್ನು ಬಳ್ಳಾರಿ ಕೋವಿಡ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 13 ಸೋಂಕಿತರು ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 2 ಸೋಂಕಿತರು ಹೊರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದ್ದರಿಂದ ತಾಲೂಕಿನ ಸಾರ್ವಜನಿಕರು ಕರೋನಾ ನಿಯಮವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ರೋಗವನ್ನು ತಡೆಯಬಹುದೆಂದು ತಿಳಿಸಿದರು.
ತಾಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಮಾತನಾಡಿ ಕರೋನಾ ಮೂರನೇ ಅಲೆಗೆ ಅವಶ್ಯಕತೆ ಇರುವಷ್ಟು ಸಿದ್ದತೆ ಮಾಡಿಕೊಳ್ಳಲಾಗಿದೆ, ಸಾರ್ವಜನಿಕರು ಸಹಕಾರದಿಂದ ಎರಡನೇ ಅಲೆಯಂತೆ ಮೂರನೇ ಅಲೆಯನ್ನು ಸಂಪೂರ್ಣವಾಗಿ ತಡೆಯುಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷ ವೆಂಕಟರಾಮರೆಡ್ಡಿ, ವೈಧ್ಯರಾದ ಡಾ.ದಮ್ಮೂರು ಬಸವರಾಜ, ಡಾ.ಪ್ರಶಾಂತ, ಡಾ.ಅನಿಲ ಕುಮಾರ, ಡಾ.ಚೆನ್ನವೀರ, ಮಲ್ಲಿಕಾರ್ಜುನ ರೆಡ್ಡಿ, ಫಾರಂಸಿ ಅಧಿಕಾರಿ ಮಲ್ಲಿಕಾರ್ಜುನ, ಆರೋಗ್ಯ ಸಿಬ್ಬಂದಿಗಳಾದ ಪ್ರಹ್ಲಾದ್, ನರೇಶ ಇದ್ದರು.
Attachm