ಸೋಂಕಿತ ಮಕ್ಕಳಿಗೆ ವಿಶೇಷ ಕೋವಿಡ್ ಕೇರ್ ಪ್ರಾರಂಭ-ಜೊಲ್ಲೆ

ಕೋವಿಡ್ ಮೂರನೇ ಅಲೆ:ಚಿಕಿತ್ಸೆಗೆ ಸಕಲ ಸಿದ್ಧತೆ
ರಾಯಚೂರು.ಜು.೧೧-ಕೊರೊನಾ ಮೂರನೇ ಅಲೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯು ಕಳೆದ ಎರಡು ತಿಂಗಳಿಂದ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಕೊರೊನ ಸೋಂಕಿತ ಮಕ್ಕಳಿಗಾಗಿ ವಿಶೇಷ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಚಿಂತನೆ ನಡೆಸಲಾಗಿದೆ
ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹೇಳಿದರು.
ಅವರಿಂದು ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಕೊರೊನಾ ೩ನೇ ಅಲೆ ಆತಂಕ ಹಿನ್ನೆಲೆ ನಮ್ಮ ಇಲಾಖೆಯ ವತಿಯಿಂದ ಕಳೆದ ಎರಡು ತಿಂಗಳಿಂದ ಪೂರ್ವ ತಯಾರಿ ನಡೆಸಿದ್ದುಕೊರೊನಾ ಸೋಂಕಿತ ಮಕ್ಕಳಿಗಾಗಿ ವಿಶೇಷ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಚಿಂತನೆ ನಡೆಸಿದ್ದೇವೆ,
ಕೋವಿಡ್ ಕೇರ್ ಸೆಂಟರ್ ನಲ್ಲಿ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳಿಗಾಗಿ ವಿಶೇಷ ವಾರ್ಡ್ ಆರಂಬಿಸಲಿದ್ದು
ಚಿಕ್ಕ ಮಕ್ಕಳಿಗೆ ಕೊರೊನ ಸೋಂಕು ಕಂಡು ಬಂದರೆ ಕೋವಿಡ್ ಸೆಂಟರ್ ಅಲ್ಲಿ ಅವರ ಪೋಷಕರು ಜೊತೆಗಿರಲು ವ್ಯವಸ್ಥೆ ಮಾಡಲಾಗುತ್ತದೆ.
ಮಕ್ಕಳಿಗಾಗಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಕೇರ್ ಪ್ರಾರಂಭಿಸಲಾಗುವುದು.
ಆರೋಗ್ಯ ಇಲಾಖೆಯಲ್ಲಿಯೂ ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಅಪೌಷ್ಟಿಕತೆ ಹೊಂದಿದ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುವ ಸಂಭವ ಇದೆ.ಆಪೌಷ್ಟಿಕತೆ ಮಕ್ಕಳಿಗೆ ಮೊದಲು ಗುರುತಿಸಿ ಅವರಿಗೆ ನಮ್ಮ ಇಲಾಖೆಯ ವತಿಯಿಂದ ಐಸಿಡಿಎಸ್ ಕಾರ್ಯಕ್ರಮದಿಂದ ಚಿಕಿತ್ಸೆಗೆ ವ್ಯವಸ್ಥೆ ನೀಡಲು ಈಗಾಗಲೇ ಸೂಚಿಸಲಾಗಿದೆ.
ಪ್ರತಿ ಜಿಲ್ಲೆಯ ಪರಿಸ್ಥಿತಿ ತಿಳಿದುಕೊಂಡು ಅಪೌಷ್ಟಿಕತೆ ಮಕ್ಕಳ ಬಗ್ಗೆ ಗಮನಹರಿಸಲು ಮುಂದಾಗುತ್ತೇವೆ.
ಸಾಮಾಜಿಕ ಜಾಲತಾಣ ಗಳಲ್ಲಿ ಹಟಿದಾಡುವ ಮೇಸೆಜ್ ಗಳಿಗೆ ಅನಾಥ ಮಕ್ಕಳು ಬಲಿಯಾಗಬಾರದು ಇದರಿಂದ ರಾಜ್ಯದಲ್ಲಿ ಸುಮಾರು ೩೦ರಿಂದ ೩೨ ಮಕ್ಕಳು ಅನಾಥ ರಾಗಿದ್ದರೆ ಇವರ ಉಜ್ವಲ ಭವಿಷ್ಯ ಮಹತ್ವವಾಗಿದ್ದು ಮಕ್ಕಳ ಭವಿಷ್ಯಕ್ಕೆ ನಮ್ಮ ಇಲಾಖೆ ಸದಾ ಸಿದ್ದವಾಗಿದೆ.
ಕೊರೊನ ಸೋಂಕು ತಾಗುಲಿದ ನಂತರ ಕೆಲವು ಮಕ್ಕಳಿಗೆ ತೊಂದರೆ ಶುರುವಾಗಿವೆ ಇದರಿಂದ ಮಕ್ಕಳು ಅನಾರೋಗಕ್ಕೆ ತುತ್ತಾಗುತ್ತಿದ್ದಾರೆ ಈ ಕುರಿತು ಆರೋಗ್ಯ ಸಚಿವರ ಜೊತೆಗೆ ಚರ್ಚೆ ಮಾಡಿದ್ದು ಕೂಡಲೇ ಮಕ್ಕಳ ಚಿಕಿತ್ಸೆ ಗೆ ಬೇಕಾದ ಔಷಧಿ ಸೇರಿದಂತೆ ಇತರೆ ಸಿದ್ಧತೆ ಮಾಡಿಕೊಂಡಿದ್ದೇವೆ ಈ ಕುರಿತು ದೇವಿಶೆಟ್ಟಿಯರ ತಂಡ ಪೋಷ್ಟ್ ಕೋವಿಡ್ ನಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಆರೈಕೆ ಮಾಡಬೇಕು ಎಂದು ತಿಳಿಸಿದ್ದು ರಾಜ್ಯದಲ್ಲಿ ಮಕ್ಕಳ ಔಷಧಿಯಲ್ಲಿ ಏನು ಕೊರತೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.