ಸೋಂಕಿತರ ಸೇವೆಗೆ ಸದಾ ಸಿದ್ದ; ಡಿ.ಜಿ ಶಾಂತನಗೌಡ

ಹೊನ್ನಾಳಿ.ಮೇ.೨೯ ; ಕೊರೋನಾ ಸಂಕಷ್ಟದಲ್ಲಿ ಯಾವುದೇ ಬೇಧಭಾವವಿಲ್ಲ ಎಲ್ಲರೂ ಜನರ ಸೇವೆ ಮಾಡಬೇಕಾಗಿದೆ,ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಹ ಕೊರೋನಾ ಸೋಂಕಿತರ ಸೇವೆಗೆ ಸದಾ ಸಿದ್ದವಾಗಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಪಟ್ಟಣದ ಹಳೆ ಆಸ್ಪತ್ರೆಯ ಮುಂಭಾಗದಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅಂಬುಲೇನ್ಸ್ ವಾಹನದ ಕೀಲಿಕೈಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್.ಬಂತಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.ಕೊರೋನಾ ಸೋಂಕಿತರನ್ನು ಗ್ರಾಮಗಳಿಂದ ತುರ್ತಾಗಿ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಕರೆ ತರಲು ಹಾಗೂ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ನಿಂದ ಬಡ ಜನರನ್ನು ತಮ್ಮ ಮನೆಗಳಿಗೆ ತಲುಪಿಸಲು ಸಹಕಾರಿಯಾಗಲು ಅಂಬ್ಯುಲೇನ್ಸ್ ವಾಹನವನ್ನು ಆರೋಗ್ಯ ಸೇವೆಗಾಗಿ ಇಲಾಖೆಗೆ ನೀಡಲಾಗುತ್ತಿದೆ ಎಂದು ಹೇಳಿದರು. ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮರ್, ಮಾಜಿ ಮುಖ್ಯಮಂತ್ರಿ, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ತಾಲೂಕು ಕಾಂಗ್ರೇಸ್ ಪಕ್ಷದವತಿಯಿಂದ ಹಾಗೂ ತಮ್ಮ ಸ್ವಂತ ಖರ್ಚು ಹಾಗೂ ನಿರ್ವಹಣೆಯಲ್ಲಿ ಜನರ ಸೇವೆಗಾಗಿ ಒಂದು ಅಂಬ್ಯುಲೇನ್ಸ್ನ್ನು ಜನಸೇವೆಗಾಗಿ ಸಮರ್ಪಿಸುತ್ತಿದ್ದೇವೆ ಎಂದರು.ಈ ಅಂಬುಲೆನ್ಸ್ ವಾಹನದ ಜನಸೇವಾ ನಿರ್ವಹಣೆ ಆರೋಗ್ಯಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಇದರ ಜೊತೆಗೆ ವಾಹನಕ್ಕೆ ಅಗತ್ಯವಾದ ಇಂಧನ, ಚಾಲಕನ ಭತ್ಯೆ ಇತರೆ ನಿರ್ವಹಣೆಯನ್ನು ಸಂಪೂರ್ಣವಾಗಿ ತಾನೇ ನೋಡಿಕೊಳ್ಳುವುದಾಗಿ  ಸ್ಪಷ್ಟಪಡಿಸಿದರು.ಮುಂದಿನ ದಿನದಲ್ಲಿ ಅವಳಿ ತಾಲೂಕುಗಳ ಸುಮಾರು 250 ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೇಜರ್‌ಗಳನ್ನು ಕೂಡ ವಿತರಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸನಗೌಡ ಕೊಟೂರ, ತಾ.ಪಂ. ಇ.ಒ. ಗಂಗಾಧರ ಮೂರ್ತಿ, ತಾಲೂಕು ಅರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್,ಬಂತಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜಿ.ಪಂ.ಸದಸ್ಯ ದೊಡ್ಡೇರಿ ಡಿ.ಜಿ.ವಿಶ್ವನಾಥ್ ಸಾಸ್ವೇಹಳ್ಳಿ ಬ್ಲಾಕ್‌ಕಾಂಗ್ರೇಸ್ ಅಧ್ಯಕ್ಷ ಗದ್ದಿಗೇಶ್, ಜಿ.ಪಂ., ಮಾಜಿ ಸದಸ್ಯ ಎಂ. ರಮೇಶ್, ಎನ್‌ಎಸ್‌ಯುಐನ ರಾಜ್ಯ ವಕ್ತಾರ ದರ್ಶನ್ ಬಳ್ಳೇಶ್ವರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.