ಸೋಂಕಿತರ ಸಂಪರ್ಕದಲ್ಲಿದ್ದವರುಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಕರೆ

ಜಗಳೂರು.ಏ.೨೩; ಪಟ್ಟಣದ ಎರಡನೇ ವಾರ್ಡ್ ನಲ್ಲಿ  ಮುಖ್ಯ ಅಧಿಕಾರಿ ರಾಜು ಡಿ ಬಣಕಾರ್ ಅವರ ನೇತೃತ್ವದ ಸ್ಯಾನಿಟೇಷನ್ ಮತ್ತು ಕೊರೋನ ವೈರಸ್ ಗಂಟಲು ದ್ರವ ಟೆಸ್ಟ್  ಮಾಡಿಸಲಾಯಿತು ನಂತರ ಮಾತನಾಡಿದ ಮುಖ್ಯ ಅಧಿಕಾರಿ ಕೋರೋನ ವೈರಸ್ ಇರುವ ರೋಗಿಗಳ ಮನೆಗೆ  ಇಂದು ಭೇಟಿ ನೀಡಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿಗಳೊಂದಿಗೆ ಕೊರೋನ ವೈರಸ್ ಬಂದಿರುವ ಸಿಬ್ಬಂದಿಗಳು ಮನೆಯಲ್ಲಿ ಇಲ್ಲದೆ ಇರುವುದರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಕ್ಕಪಕ್ಕದಲ್ಲಿರುವ ಪ್ರೈಮರಿ ಕಾಂಟೆಕ್ಟ್ ನಲ್ಲಿರುವ ವ್ಯಕ್ತಿಗಳನ್ನು ಗಂಟಲು ದ್ರವ ಪರೀಕ್ಷೆ ಮಾಡಲು ಹೋದರೆ ಯಾರು ಜನ ಸಹಕರಿಸುತ್ತಿಲ್ಲ ಇದರಿಂದ ನಾವು ಕೆಲಸ ಮಾಡಲು ತುಂಬಾ ತೊಂದರೆಯಾಗುತ್ತದೆ  ಬೆಳಗಿನಿಂದ ಸುಮಾರು ಎರಡು ಗಂಟೆಗಳ  ಕಾಯ್ದು ಕುಳಿತರು ಯಾರೂ ಮುಂದೆ ಬರುತ್ತಿಲ್ಲ  ದಯವಿಟ್ಟು ಸಾರ್ವಜನಿಕರು ಸಹಕಾರ ನೀಡಬೇಕು ಪ್ರತಿಯೊಬ್ಬರೂ ಆರ್.ಟಿ ಪಿ.ಸಿ ಆರ್ ಗಂಟಲು ದ್ರವವನ್ನು ಸ್ವಯಂ ಪ್ರೇರಿತವಾಗಿ ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕು  ಅದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಕರೋನ ವೈರಸ್ ತಡೆಗಟ್ಟಲು ಸಾರ್ವಜನಿಕರು  ಸಹಕಾರ ನೀಡಬೇಕು ಸಾರ್ವಜನಿಕರು  ಮನೆಯಿಂದ ಹೊರಗೆ ಬಂದರೆ ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು ಸ್ಯಾನಿಟೈಸರ್ ಬಳಸಬೇಕು ಸಾರ್ವಜನಿರು  ಆರೋಗ್ಯ ಇಲಾಖೆಗೆ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು  ಈ ಸಂದರ್ಭದಲ್ಲಿ ಪ.ಪಂ ಕಂದಾಯ ನಿರೀಕ್ಷಕ (ಸಂತೋಷ್ ಕುಮಾರ್. ಆರೋಗ್ಯ ನಿರೀಕ್ಷಕರಾದ ಕೀಫಾಯತ್ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್ ವಿಜಯಲಕ್ಷ್ಮಿ. ರವಿಕುಮಾರ್ ಆಶಾ ಕಾರ್ಯಕರ್ತೆ ಮಮತಾ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಸಂತೋಷ್. ರಾಜಪ್ಪ ಸೇರಿದಂತೆ ಇದ್ದರು