ಸೋಂಕಿತರ ಯೋಗಕ್ಷೇಮ ವಿಚಾರಣೆ


ಹುಬ್ಬಳ್ಳಿ ಜೂ 1 : ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಿಗೆ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ ಅವರ ನೇತೃತ್ವದಲ್ಲಿ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಲಾಯಿತು.
ಯಲಿವಾಳ ಸರ್ಕಾರಿ ಪ್ರೌಢ ಶಾಲೆ ತರ್ಲಘಟ್ಟ ಮೊರಾರ್ಜಿ ವಸತಿ ನಿಲಯ ಕುಂದಗೋಳ ಶಿವಾನಂದಮಠದ ಪ್ರಸಾದ ನಿಲಯ ಯರಗುಪ್ಪಿ ಗ್ರಾಮ ಪಂಚಾಯಿತಿಯ ಕೋವಿಡ್ ಸೆಂಟರ್‍ಗಳಿಗೆ ಭೇಟಿ ನೀಡಿ 07 ಹಾಸಿಗೆಯಿದ್ದು, ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಯೋಗ ಕ್ಷೇಮ ವಿಚಾರಿಸಿ ಕೋವಿಡ್ ಜಾಗೃತಿ ಮೂಡಿಸಿದರು.
ಕುಂದಗೋಳ ತಾಲೂಕಿನ ಸ್ಥಳೀಯ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಎಲ್ಲ ವೈದ್ಯಕೀಯ ಕುಟುಂಬಕ್ಕೂ ಕೃತಜ್ಞತೆ ಸಲ್ಲಿಸಲಾಯಿತು.
ಕೊನೆಗೆ ಭೇಟಿ ನೀಡಿದ ಯರಗುಪ್ಪಿ ಪಂಚಾಯಿತಿಯಲ್ಲಿ ಕೋವಿಡ್ ಸೋಂಕು ಇರುವವರು ಸೆಂಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಲ್ಲರೂ ಕೋವಿಡ್ ಸೆಂಟರ್ ಗೆ ಬರಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಡಾ. ಮಹೇಶ್ ನಾಲವಾಡ, ಜಿಲ್ಲಾ ಸಂಚಾಲಕರಾದ ಡಾ?ಬಿ.ಎಂ. ಹಿರೇಮಠ,ಸ್ಥಳೀಯರಾದ ಡಾ. ಶಂಕರಗೌಡ ಹೊಸಳ್ಳಿ, ಸ್ಥಳೀಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು,
ಮಂಡಲ ಅಧ್ಯಕ್ಷ ರವಿಗೌಡ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಲಾಲಸಾಬ ನದಾಫ್ (ಅಪ್ಪಣ್ಣ), ಯರಗುಪ್ಪಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಅಣ್ಣೀಗೇರಿ, ರವಿ ಕುಂಬಾರ, ಸಿ. ಟಿ.ಪಾಟೀಲ್ ಸೇರಿದಂತೆ ಪ್ರತಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಯುವ ಉತ್ಸಾಹಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು.