ಸೋಂಕಿತರ ಮನೆಗೆ ಸ್ಟಿಕ್ಕರ್: ಶಿಲ್ಪಾನಾಗ್

ಮೈಸೂರು,ಏ.21:- ಕೋವಿಡ್ ಮಹಾಮಾರಿ ಎರಡನೇ ಅಲೆ ಎದ್ದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇರುವುದಕ್ಕಿಂತ ತುಂಬಾ ಹೆಚ್ಚಿದೆ. ಇನ್ನು ಮುಂದೆ 20ದಿನಗಳಲ್ಲಿ ನಂಬರ್ ಆಫ್ ಕೇಸಸ್ ಇನ್ನೂ ಜಾಸ್ತಿ ಆಗುವ ಸೂಚನೆಗಳು ಆರೋಗ್ಯ ಇಲಾಖೆಯಿಂದ ಇದೆ. ಅದಕ್ಕಾಗಿ ಇಂದಿನಿಂದ ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿದೆ. ಸೋಂಕಿತರ ಮನೆಗೆ ಸ್ಟಿಕ್ಕರ್ ಅಂಟಿಸಲಾಗುವುದು ಎಂದು ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಮಾಹಿತಿ ನೀಡಿದರು.
ಇಂದು ಪಾಲಿಕೆಯ ತಮ್ಮ ಕಛೇರಿಯಲ್ಲಿ ಮಾಹಿತಿ ನೀಡಿದ ಅವರು ನಿನ್ನೆ 699 ಪಾಸಿಟಿವ್ ಕೇಸಸ್ ನಗರದಲ್ಲಿ ಬಂದಿದೆ. ಅದರಲ್ಲಿ 400 ಸಿಟಿಗೆ ಸೇರಿರುವಂತದ್ದು. 4 ಸಾವು ಆಗಿದೆ. ದಿನಾಲೂ ಲಸಿಕೆ ಕಾರ್ಯಕ್ರಮ ನಡೆದಿದೆ. 45ರ ಮೇಲ್ಪಟ್ಟವರಿಗೆ ನಡೆಯುತ್ತಿದೆ. ನಿನ್ನೆ 4800 ಜನರಿಗೆ ಲಸಿಕೆ ಹಾಕಲಾಗಿದೆ. ಮೇ.1ರಿಂದ 18ವರ್ಷದಮೇಲ್ಪಟ್ಟವರಿಗೆ ಲಸಿಕಾಭಿಯಾನ ಆರಂಭವಾಗಲಿದೆ. ಹಾಗೆ ನಿನ್ನೆ ನಗರದಲ್ಲಿ 1777ಮಂದಿಗೆ ಟೆಸ್ಟಿಂಗ್ ಕೂಡ ಆಗಿದೆ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಬೇರೆಲ್ಲ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕೋವಿಡ್ ಗೆ ಒತ್ತನ್ನು ನೀಡಬೇಕು. ¸
Áರ್ವಜನಿಕರು ಸೇರುವಂಥದ್ದು, ಸರ್ಕಾರಿ ಕಛೇರಿಗಳಲ್ಲಿ ಹಾಗೆ ಬೇರೆ ವಿಷಯಕ್ಕೆ ಮೀಟಿಂಗ್ ಮಾಡುವಂಥದ್ದನ್ನು ಸ್ವಲ್ಪ ಅವೈಡ್ ಮಾಡಿ, ನೆಕ್ಟ್ಸ್ ಒಂದು ವಾರ ಸಂಪೂರ್ಣ ಕೋವಿಡ್ ಗೆ ಸಂಬಂಧಿಸಿದ ಮತ್ತು ಬೇಸಿಗೆ ಇರೋದರಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಬಗ್ಗೆ ಮಾತ್ರ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಅದೇ ಪ್ರಕಾರ ನಮ್ಮಲ್ಲಿ ಕೂಡ ಬೇರೆಲ್ಲ ಸಭೆಗಳನ್ನು ಆದಷ್ಟು ರದ್ದು ಮಾಡುತ್ತಿದ್ದೇವೆ. ಇಲ್ಲ ವರ್ಚುವಲ್ ಆಗಿ ಮಾಡುತ್ತಿದ್ದೇವೆ. ಕೋವಿಡ್ ಸಂಬಂಧಿತ ತಂಡಕ್ಕೆ ಮಾತ್ರ ದಿನಾಲೂ ಸಭೆ ನಡೆಸುತ್ತಿದ್ದೇವೆ ಎಂದರು. 26ಮೈಕ್ರೋ ಕಂಟೈನ್ ಮೆಂಟ್ ಝೋನ್ ಗಳಾಗಿದೆ. ಮುಂಚಿನ ತರ ಸಂಪೂರ್ಣ ಲಾಕ್ ಡೌನ್ ಇಲ್ಲದೆ ಇರೋದರಿಂದ ಎಲ್ಲಿ ಪಾಸಿ ಟಿವ್ ಪ್ರಕರಣ ಕಂಡು ಬರುತ್ತಿದೆಯೋ ಅಲ್ಲಿ ನಮ್ಮ ತಂಡ ಹೋಗಿ ಮೈಕ್ರೋ ಕಂಟೈನ್ ಮೆಂಟ್ ಝೋನ್ ಅಂತ ಮಾಡುತ್ತಿದ್ದಾರೆ. ಅಲ್ಲಿ ಸ್ಯಾನಿಟೈಸೇಶನ್ ಮಾಡುವಂಥದ್ದು, ಅಲ್ಲಿ ಪ್ರೈಮರಿ ಸೆಕೆಂಡರಿ ಸಂಪರ್ಕ ಹೊಂದಿರುವವರ ಟೆಸ್ಟಿಂಗ್ ಮಾಡುವಂತದ್ದು ಮತ್ತು ಕ್ವಾರೆಂಟೈನ್, ವಾಚ್ ಹೋಂ ಐಸೋಲೇಶನ್ ಗಳನ್ನು ಬಿಎಲ್ ಒ ಗಳು ಮಾಡುತ್ತಿದ್ದಾರೆ.
ಪಾಲಿಕೆ ವತಿಯಿಂದ ಈಗಾಗಲೇ ಕಳೆದ ವರ್ಷ ಹೇಗಿತ್ತೋ ಹಾಗೆ ಒಂದು ತಂಡವನ್ನು ರಿಆ?ಯಕ್ಟಿವೇಟ್ ಮಾಡಿದ್ದೇವೆ. ಅದರಲ್ಲಿ ಝೋನ್ ಗೆ 9 ಟೆಸ್ಟಿಂಗ್ ಟೀಮ್ ಮಾಡಿದ್ದೇವೆ. ಎಲ್ಲ ಸೂಪರ್ ವೀಶನ್ ಮತ್ತು ಜವಾಬ್ದಾರಿಯನ್ನು ವಲಯ ಆಯುಕ್ತರೇ ವಹಿಸಿಕೊಂಡಿದ್ದು ಅದರ ಜೊತೆಗೆ ನೋಡಲ್ ಆಫೀಸರ್ ಅಂತ ಹಾಕಿ ದಿನಾಲೂ ರಿವ್ಯೂ ಮೀಟಿಂಗ್ ವರ್ಚುವಲ್ ಆಗಿ ನಡೆಯುತ್ತಿದೆ.
9ಟೆಸ್ಟಿಂಗ್ ತಂಡಕ್ಕೆ ಪ್ರತಿ ಟೆಸ್ಟಿಂಗ್ ಜಾಸ್ತಿ ಮಾಡಿದಂತೆ ನಮಗೆ ಜಾಸ್ತಿ ಪಾಸಿಟಿವ್ ಗುರುತಿಸಿದಾಗ ಅವರಿಗೆ ಐಸೋಲೇಶನ್ ಮಾಡುವಂಥದ್ದು, ಅನುಕೂಲ ಮಾಡಿಕೊಟ್ಟು ಬೇರೆಯವರಿಗೆ ಹರಡುವುದನ್ನು ತಪ್ಪಿಸಲು ಟೆಸ್ಟಿಂಗ್ ಬಹಳ ಮುಖ್ಯವಾಗತ್ತೆ. 9 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ 9ಟೆಸ್ಟಿಂಗ್ ಟೀಮ್ ನ ನೋಡಲ್ ಆಫೀಸರ್ ಆಗಿದ್ದಾರೆ. ಹಾಗೆ ನಮ್ಮಲ್ಲಿ ಕಳೆದ ವರ್ಷ ಇದ್ದ ಹಾಗೆ 150 ಜನ ಬಿಎಲ್ ಒ(ಬೂತ್ ಲೆವೆಲ ಆಫಿಸರ್ಸ್) ಗಳು ಸಾಮಾನ್ಯವಾಗಿ ಶಿಕ್ಷಕರು ಚುನಾವಣೆಯಲ್ಲಿ ಕೆಲಸ ಮಾಡಿದವರು ಸೋಮವಾರ ವರದಿ ಮಾಡಿಕೊಂಡಿದ್ದಾರೆ. ಅದರಲ್ಲಿ 65ವಾರ್ಡ್ ಗೆ ಇಬ್ಬರಂತೆ ಒಬ್ಬರು ಹೋಂ ಐಸೋಲೇಶನ್ ಗೆ ಆ?ಯಪ್ ಮತ್ತು ಕ್ವಾರೆಂಟೈನ್ ವಾಚ್ ಆ?ಯಪ್ ಗೆ ಮೂಲಕ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅವರು ಕ್ವಾರೆಂಟೈನ್ ನಲ್ಲಿಯೇ ಇದ್ದಾರೆ, ಈಸೋಲೇಶನ್ ನಲ್ಲಿಯೇ ಇದ್ದಾರೆ ಅನ್ನೋದಕ್ಕೆ ಖಚಿತಪಡಿಸುವುದನ್ನು ಮಾಡುತ್ತಾರೆ ಎಂದರು.
130 ಮಂದಿ ಈ ಕಾರ್ಯ ಮಾಡುತ್ತಿದ್ದಾರೆ. ಮೂರು ಕಂಟ್ರೋಲ್ ರೂಂ ಮಾಡಿದ್ದೇವೆ. ವಾಣಿ ವಿಲಾಸದಲ್ಲಿ ಕೂಡ ವಾರ್ ರೂಮ್ ಅಂತ ಮಾಡಿದ್ದೇವೆ. ಸಿಆರ್.ಎನ್ ಆರ್ ಮತ್ತು ಕೆ.ಆರ್ ಕ್ಷೇತ್ರಗಳಿಗೆ ನಾವು ಎರಡೆರಡು ಹಾಟ್ ಲೈನ್ ಅಂತ ಓಪನ್ ಮಾಡಿದ್ದೇವೆ.
ಜಿಲ್ಲಾಧಿಕಾರಿಗಳ ಕಛೇರಿ ವಾರ್ ರೂಂ ಇದ್ದರೂ ಕೂಡ ಇನ್ನೂ ಹೆಚ್ಚಾಗಿ ಜನರಿಗೆ ತಲುಪಲಿ ಅನ್ನುವ ಉದ್ದೇಶಕ್ಕೆ ಸಹಾಯ ಮಾಡಲಿ ಅಂತ 20ಜನ ಬಿಎಲ್ ಒಗಳನ್ನು ನೇಮಿಸಿ ಮೂರು ಕೂಡ ಮಾಡಿದ್ದೇವೆ. ನಂಬರ್ ಕೂಡ ಕೊಟ್ಟಿದ್ದೇವೆ. ನಾನು ಮತ್ತು ಡಿಸಿಪಿ ಗೀತ ಪ್ರಸನ್ನ ಸೇರಿ ತಂಡ ರಚಿಸಿ ಎಲ್ಲೆಲ್ಲಿ ಸಭೆ ಸಮಾರಂಭ ನಡೆಯುತ್ತಿದೆ ಇವತ್ತಿನಿಂದ ಸ್ಟ್ರೀಕ್ಟ್ ಆಗಿ ದಾಳಿ ನಡೆಸಿ ದಂಡ ಹಾಕುವುದನ್ನು ಮಾಡಲಿದ್ದೇವೆ. ಇನ್ನು ತುಂಬಾ ಸ್ಟ್ರಿಕ್ಟ್ ಆಗಿ ನಡೆಯಲಿದೆ ಎಂದು ತಿಳಿಸಿದರು. ಸಾರ್ವಜನಿಕರಲ್ಲಿ ವಿನಂತಿ ಏನೆಂದರೆ ಕೋವಿಡ್ ನಿಯಮಗಳ ಪ್ರಕಾರ ಮದುವೆಗೆ ಕಲ್ಯಾಣ ಮಂಟಪಗಳಲ್ಲಿ 50 ಜನ ರ ಮೇಲೆ ಸೇರಬಾರದು, ಶವಸಂಸ್ಕಾರಕ್ಕೆ 20ಜನರ ಮೇಲೆ ಸೇರಬಾರದು. ಹಾಗೆ ಅಂಗಡಿ ಮುಂಗಟ್ಟುಗಳು ಸಾಮಾಜಿಕ ಅಂತರ ಅನುಸರಿಸುವುದು, ಮಾಸ್ಕ್ ಧರಿಸುವುದು, ನಡೆಯಬೇಕು. ಇನ್ನು ನಾವು ತುಂಬಾ ಸ್ಟ್ರಿಕ್ಟ್ ಆಗಿ ದಂಡ ಹಾಕುತ್ತೇವೆ. ಲಾಕ್ ಡೌನ್ ಮಾಡಲು ಜಿಲ್ಲಾಡಳಿತಕ್ಕೆ ಅನುಮತಿ ಇಲ್ಲ. ರಾಜ್ಯ ಸರ್ಕಾರ ಮಾಡಿರೋದನ್ನು ತಗೋಬೇಕು. ಇಂದಿನಿಂದ ಮೈಸೂರಿನಲ್ಲಿ ಜನನಿಬಿಡ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಶಿಫ್ಟಿಂಗ್ ಮಾಡಬೇಕಾ ಬೇಡವಾ ಅನ್ನೋದನ್ನು ಪರಿಶೀಲಿಸಲಾಗುವುದು.
ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಕ್ರಮವಹಿಸಲಾಗುವುದು. ಲಾಕ್ ಡೌನ್ ಮಾಡಲು, ಶಿಪ್ಟ್ ಮಾಡಲು ಕ್ರಮ ತೆಗೆದುಕೊಂಡಿಲ್ಲ. ಎಲ್ಲೆಲ್ಲಿ ಏನೇನಾಗುತ್ತಿದೆ. ಸಾಮಾಜಿಕ ಅಂತರ ಇಲ್ಲದೆ ಹರಡುತ್ತಿದೆಯಾ ಎಂದು ನೋಡಲು ಇಂದು ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಬೇಕು ಅಂತ ಆದಲ್ಲಿ ಖಂಡಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಮಾಸ್ಕ್ ಧರಿಸದವರಿಗೆ 94ಸಾವಿರ ರೂ.ದಂಡ ಪಾಲಿಕೆಯಿಂದಲೇ ಸಂಗ್ರಹವಾಗಿದೆ. ಸಾರ್ವಜನಿಕರಿಗೆ ಎಷ್ಟೇ ವಿನಂತಿಸಿದರೂ ಮಾಸ್ಕ್ ಧರಿಸದೇ ಓಡಾಡುವುದು ಕಂಡು ಬಂದಿದೆ. ಸುಮ್ನೆ ನಾವು ನೋಡಿದ ತಕ್ಷಣ ಹಾಕುವುದು ಅಂತ ಅಲ್ಲ, 9ತಂಡ ಮಾಡಿ 15ಮಂದಿ ಪೆÇಲೀಸರು ತಂಡದಲ್ಲಿದ್ದಾರೆ. ಮೂರು ಬಾರಿ ಉಲ್ಲಂಘಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ಮನೆಯಲ್ಲಿ 8ಮಂದಿ ಇದ್ದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಲ್ಲಿ ಆ ಮನೆಗೆ ಪಾಲಿಕೆಯಿಂದ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆಯಲಿದೆ. ಜನರಿಗೆ ಪಾಸಿಟಿವ್ ಕೇಸಸ್ ಇದೆ ಎಂದು ಎಚ್ಚರಿಕೆಯಿಂದ ಇರಬೇಕು ಎನ್ನುವ ಅರಿವಿರತ್ತೆ. ಗೊತ್ತಿಲ್ಲದೆ ಮಾಮೂಲಿ ಮಾತಾಡಿ ಹರಡುವ ಸಾಧ್ಯತೆ ಇರತ್ತೆ ಅದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.