ಸೋಂಕಿತರ ಮನೆಗಳಿಗೆ ಇಓ ಭೇಟಿ

ಜಗಳೂರು.ಮೇ.೧೮: ಮಲೆಮಾಚಿಕೆರೆ, ಬಂಗಾರಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಭಾನುವಾರ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಮಲ್ಲನಾಯ್ಕ್ ಈ ಗ್ರಾಮಗಳಿಗೆ ಬೇಟಿ ನೀಡಿದರು.ನಂತರ ಮಾತನಾಡಿದ ಅವರು ಮಲೇಮಾಚಿಕೆರೆ, ಬಂಗಾರಕ್ಕನಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೋವಿಡ್ ಪಾಜಿಟೀವ್ ಬಂದ ಮನೆಗೆ ಬೇಟಿ ನೀಡಿ, ಮನೆ ಬಿಟ್ಟು ಎಲ್ಲೂ ಹೋಗದಂತೆ ತಿಳಿಸಿ, ಕೋವಿಡ್ ಬಂದವರನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಮುಂದೆ ಹರಡದಂತೆ ಗ್ರಾಮಗಳಲ್ಲಿ ತುರ್ತಾಗಿ ಇನ್ನೊಮ್ಮೆ ಸ್ಯಾನಿಟೇಜ್ ಸಿಂಪಡಣೆ ಮಾಡಿಸಲು ಸೂಚಿಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಡ್ರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಗುರುಸಿದ್ದಪ್ಪ ಸೇರಿದಂತೆ ಪೋಲೀಸರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.