ಸೋಂಕಿತರ ನೆರವಿಗೆ ಧಾವಿಸಿದ ಸೆಲೆಬ್ರಿಟಿಗಳು

ಮುಂಬೈ,ಮೇ.೧- ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಚಿತ್ರ ತಾರೆಯರು ಮತ್ತು ಸೆಲೆಬ್ರಿಟಿಗಳು ಒಂದಿಲ್ಲೊಂದು ರೀತಿಯಲ್ಲಿ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಈ ಪೈಕಿ ಬಾಲಿವುಡ್ ನಟ ಆರ್ ಮಾಧವನ್ ಅವರ ಪತ್ನಿ ಸರಿತಾ ಬಿರ್ಜೆ ಅವರು ಕೋವಿಡ್ ಸಮಯದಲ್ಲಿ ಪ್ರಪಂಚದಾದ್ಯಂತ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡಮಕ್ಕಳಿಗೆ ಪಾಠ ಮಾಡುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸರಿತಾ ಅವರ ಈ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸರಿತಾ ಅವರ ಕೆಲಸವನ್ನು ಹಲವು ಮಂದಿ ಪ್ರಶಂಸಿಸಿ ಈ ರೀತಿಯ ಕಾರ್ಯ ಅಗತ್ಯವಿತ್ತು ಎಂದು ಹೇಳಿದ್ದಾರೆ

ನನ್ನ ಜೀವನ ಅಪೂರ್ಣ: ಪತ್ನಿಯ ಮುಂದೆ ನನ್ನ ಜೀವನ ಅಪೂರ್ಣ ಮತ್ತು ಕೆಲಸಕ್ಕೆ ಬಾರದ್ದು ಎನಿಸುತ್ತಿದೆ ಎಂದು ನಟ ಮಾಧವನ್ ಹೇಳಿದ್ದಾರೆ.

ಬಡಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಮಾಡುವ ಪತ್ನಿಯ ವಿಡಿಯೋವನ್ನು ತಾವು ಹಂಚಿಕೊಂಡು ಪತ್ನಿಯ ಕೆಲಸವನ್ನು ಹಾಡಿ ಹೊಗಳಿದ್ದಾರೆ

ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಸಾಕಷ್ಟು ನಟರಲ್ಲಿ ಆರ್ ಮಾಧವನ್ ಕೂಡ ಒಬ್ಬರು.

ಸಾಮಾಜಿಕ ಮಾಧ್ಯಮದಲ್ಲಿ ಬಹಳ ಚಟುವಟಿಕೆಯಿಂದ ಕೂಡಿದ್ದು, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ತುಂಬಾ ಸೂಕ್ಷ್ಮ ಜೀವಿ ಕೂಡ ಹೌದು.

ಮಾಧವನ್ ಅವರು ತ್ರೀ ಈಡಿಯಟ್‌ನ ಫರ್ಹಾನ್ ಪಾತ್ರ ಮರೆಯುವಂತಿಲ್ಲ. ಇನ್ನು ಸಾಲಾ ಖಡೂಸ್, ತನು ವೆಡ್ಸ್ ಮನು, ತಂಬಿ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು ತಮ್ಮ ಪ್ರತಿಭೆ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಜನರ ಅಚ್ಚುಮೆಚ್ಚಿನ ನಟರಾಗಿ ಖ್ಯಾತಿಗಳಿಸಿದ್ದಾರೆ. ಇಂತಹ ನಟ ನಾನು ತುಂಬಾ ಚಿಕ್ಕವನು ಎಂದೆನಿಸುತ್ತಿದೆ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.