ಸೋಂಕಿತರೊಂದಿಗೆ ಉಪಹಾರ ಸವಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ.ಜೂ.೧೦ : ಕೊರೊನಾ ಸೋಂಕಿತರು ಆರೈಕೆ ಕೇಂದ್ರದಿಂದ ಗುಣಮುಖರಾಗಿ ತೆರಳುವವರೆಗೂ ನಾನು ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ ಮಾಡುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐದನೇ ದಿನದ ವಾಸ್ತವ್ಯ ಮುಗಿಸಿ ಕೊರೊನಾ ಸೋಂಕಿತರೊಂದಿಗೆ ಉಪಹಾರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.ಆರೈಕೆ ಕೇಂದ್ರದಲ್ಲಿರುವವರು ಯಾರೂ ಕೂಡ ರೋಗಿಗಳಲ್ಲಾ ಅವರೆಲ್ಲಾ ನನ್ನ ಬಂಧುಗಳು ಅವರ ಆರೈಕೆ ಮಾಡುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ಆರೈಕೆ ಕೇಂದ್ರದಲ್ಲೇ ವಾಸ್ತವ್ಯ ಮಾಡುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದರು.ಆರೈಕೆ ಕೇಂದ್ರದಲ್ಲಿ ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು ಜಾತಿ ಭೇದ ಮರೆತು ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು ಅವಳಿ ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೇ ಎಂದರು.ಯೋಗಾಬ್ಯಾಸ : ಕಳೆದ ಐದು ದಿನಗಳಿಂದ ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ ಮಾಡಿರುವ ರೇಣುಕಾಚಾರ್ಯ ಬೆಳ್ಳಂಬೆಳ್ಳಿಗೆ ಆರೈಕೆ ಕೇಂದ್ರದಲ್ಲೇ ವಾಯುವಿಹಾರ ಮಾಡಿ ಸೋಂಕಿತರಿಗೆ ಯೋಗಾಬ್ಯಾಸ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯದಂತೆ ಬೆಳ್ಳಂಬೆಳ್ಳಿಗೆ ರೇಣುಕಾಚಾರ್ಯ ದಂಪತಿಗಳು ಸೋಂಕಿತರಿಗೆ ಪ್ರಾಣಾಯಾನ, ಸೂರ್ಯನಮಸ್ಕಾರ ಸೇರಿದಂತೆ ವಿವಿಧ ಯೋಗಾಸನದ ಬಂಗಿಗಳನ್ನು ಹೇಳಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಯೋಗಾಸನವನ್ನ ಮೈಗೂಡಿಸಿಕೊಳ್ಳ ಬೇಕು, ಯೋಗಾಸನ ಬಲ್ಲವನಿಗೆ ರೋಗವಿಲ್ಲಾ ಎಂಬ ಮಾತಿದ್ದು ಇಲ್ಲಿ ಯೋಗಾಬ್ಯಾಸ ಕಲಿತವರು ಮನೆಗೆ ಹೋಗಿ ಅಲ್ಲಿಯೂ ಯೋಗವನ್ನು ಮುಂದುವರೆಸುವAತೆ ಸೂಚಿಸಿದರು.ಸೋಂಕಿತರೊAದಿಗೆ ಉಪಹಾರ : ಪ್ರತಿನಿತ್ಯ ಆರೈಕೆ ಕೇಂದ್ರದಲ್ಲಿ ಉಪಹಾರ ತಯಾರಿಸುವ ಗೃಹಕ್ಕೆ ಭೇಟಿ ನೀಡುವ ಶಾಸಕರು ಆಹಾರದ ಗುಣಮಟ್ಟ ಪರಿಶೀಲಿಸಿ ಅಡುಗೆ ಸಹಾಯಕರೊಂದಿಗೆ ಇವರೂ ಕೂಡ ಅಡಿಗೆ ತಯಾರು ಮಾಡುತ್ತಾರೆ. ಅಷ್ಟೇ ಅಲ್ಲದೇ ಆರೈಕೆ ಕೇಂದ್ರದಲ್ಲಿನ ಬಂಧುಗಳಿಗೆ ಉಪಹಾರ ಬಡಿಸಿ ಅವರೊಂದಿಗೆ ಉಪಹಾರ ಸೇವಿಸುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ.ಆಸ್ಪತ್ರೆ ಭೇಟಿ : ಎಂದಿನAತೆ ಇಂದೂ ಕೂಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಸೋಂಕಿತರ ವಾರ್ಡಗಳಿಗೆ ಭೇಟಿ ಆರೋಗ್ಯ ವಿಚಾರಿಸಿ ಅವರಿಗೆ ಧೈರ್ಯ ಹೇಳಿದರಲ್ಲದೇ ಆಸ್ಪತ್ರೆಯಲ್ಲಿನ ಆಕ್ಸಿಜನ್ ಸಿಲಿಂಡರ್‌ಗಳ ಬಗ್ಗೆ ಮಾಹಿತಿ ಪಡೆದರು. ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕರು ಸದ್ಯದರಲ್ಲದೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದ ಇಂಗಿತ ವ್ಯಕ್ತ ಪಡಿಸಿದರು.ಕೊರೊನಾ ವಾರಿಯರ್ಸಗಳಿಗೆ ಬೆಳಗ್ಗೆ ಹಾಗೂ ಮದ್ಯಾಹ್ನ ಉಪಹಾರ : ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರು, ರೋಗಿಗಳು, ಆಸ್ಪತ್ರೆಯಲ್ಲಿನ ಸಿಬ್ಬಂಧಿಗಳು ಸೇರಿದಂತೆ ಪೊಲೀಸರು, ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ನ್ಯಾಮತಿ ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳಿಗೆ ಬೆಳಗ್ಗೆ ಹಾಗೂ ಮದ್ಯಾಹ್ನದ ಉಪಹಾರ ನೀಡುತ್ತಿದ್ದು ಇಂದೂ ಕೂಡ ಶಾಸಕರ ಸಹೋದರ ಎಂ.ಪಿ.ರಮೇಶ್ ಅವರ ನೇತೃತ್ವದಲ್ಲಿ ಉಪಹಾರ ಹಾಗೂ ಮದ್ಯಾಹ್ನದ ಊಟ ವಿತರಿಸಲಾಯಿತು.ಹೊನ್ನಾಳಿ ಪಟ್ಟಣದ ವಿಜ್ಞೇಶ್ವರ ಮೆಡಿಕಲ್ಸ್ ಮಾಲೀಕರಾದ ಸದಾನಂದ್ ಇಂದೂ ಕೂಡ ಆರೈಕೆ ಕೇಂದ್ರದಲ್ಲಿನ ಸೋಂಕಿತರಿಗೆ ಸರ್ಜಿಕಲ್ ಹಾಗೂ ಎನ್ 95 ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಶಾಸಕರ ನೇತೃತ್ವದಲ್ಲಿ ವಿತರಿಸಿದರು.ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಗಿರೀಶ್ , ನಿದೇರ್ಶಕ ಶಿವು ಹುಡೇಡ್ ಸೇರಿದಂತೆ ಮತ್ತೀತತರಿದ್ದರು.