ಸೋಂಕಿತರು ಸಾರ್ವಜನಿಕರ ಸ್ಥಳಗಳಲ್ಲಿ ತಿರುಗಾಡಿದರೆ ಪ್ರಕರಣ ದಾಖಲು

??????

ಕಡಬ, ಎ.೫- ಗ್ರಾಮ ಮಟ್ಟದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಗ್ರಾ.ಪಂ ನ ಟಾಸ್ಕ್ ಪೋರ್ಸ್ ಸಮಿತಿ ಅಗತ್ಯ ಸಭೆಗಳನ್ನು ಕರೆದು ನಿರ್ಧಾರ ಕೈಗೊಳ್ಳಬೇಕು. ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಧ್ವನಿ ವರ್ದಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ಜೊತೆಗೆ ಎಚ್ಚರಿಕೆ ನೀಡಬೇಕು. ಸೋಂಕಿತರನ್ನು ಸಾರ್ವಜನಿಕರ ಸ್ಥಳಗಳಲ್ಲಿ ತಿರುಗಾಡಿದರೆ ಅಂತವರ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಸಚಿವ ಎಸ್ ಅಂಗಾರ ಸೂಚಿಸಿದರು.
ಕಡಬ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಕಡಬ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು, ಪಿಡಿಓ, ಗ್ರಾಮಕರಣಿಕರ ಜೊತೆ ತಾಲೂಕು ಮಟ್ಟದ ಕೋವಿಡ್ ಸ್ಥಿತಿಗತಿಯ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡಬ ತಾಲೂಕಿನಲ್ಲಿರುವ ಆಸ್ಪತ್ರೆಗಳಿಗೆ ಕೋವಿಡ್ ಸಂಬಂದ ಅಗತ್ಯ ಕ್ರಮಕೈಗೊಳ್ಳಲು ಸಂಬಂದಪಟ್ಟವರು ಕ್ರಮವಹಿಸಬೇಕು. ಆಸ್ಪತ್ರೆಗಳಲ್ಲಿ ತಾತ್ಕಲಿಕ ನೆಲೆಯಲ್ಲಿ ಸಿಬ್ಬಂದಿಗಳ ನಿಯೋಜನೆ ಕುರಿತು ಕ್ರಮಕೈಗೊಳ್ಳಲಾಗುವುದು . ಕೋವಿಡ್ ಟಾಸ್ಕ್ ಪೋಸ್ ಗೆ ಬೇಜವಬ್ದಾರಿಯಿಂದ ವರ್ತಿಸಿದರೆ ಸೂಕ್ತ ಕ್ರಮವಹಿಸಿಬೇಕೆಂದು ತಹಶೀಲ್ದಾರ ಅವರಿಗೆ ಸಚಿವರು ಸೂಚಿಸಿದರು. ಜವಬ್ದಾರಿಯಿದೆ.
ಕಡಬ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ ಸಭೆಗೆ ಮಾಹಿತಿ ನೀಡಿ ತಾಲೂಕಿನಲ್ಲಿ ೧೪೦ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ೩೪ ಮಂದಿ ಮನೆಯಲ್ಲಿ ಐಶೋಲೇಶನ್ ನಲ್ಲಿದ್ದಾರೆ. ೭ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನುಳಿದಂತೆ ಗುಣಮುಖರಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ , ಎಪಿಎಂಸಿ ನಿರ್ದೆಶಕಿ ಪುಲಸ್ತ್ಯಾ ರೈ ಮಾತನಾಡಿ, ಕಡಬ ತಾಲೂಕಿಗೆ ಪ್ರಭಾರ ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿಯನ್ನು ನೇಮಿಸಬೇಕು ಎಂದು ಸಚಿವರ ಗಮನ ಸೆಳೆದರು. ಕೋವಿಡ್ ಲಸಿಕೆಯ ಬಗ್ಗೆ ಜನರಲ್ಲಿರುವ ಗೊಂದಲವನ್ನು ಬಗೆಹರಿಸುವಂತೆ ಅಧಿಕಾರಿಗಳ ಗಮನ ಸೆಳೆದರು. ಕೋವಿಡ್ ಸೋಂಕಿತರ ಬಗ್ಗೆ ಸ್ಥಳಿಯ ಅಧಿಕಾರಿಗಳು ಗಮನಹರಿಸದಿರುವುದನ್ನು ಶಿರಾಡಿಯ ಘಟನೆಯನು ಉಲ್ಲೇಖಿಸಿ ಕೃಷ್ಣ ಶೆಟ್ಟಿಯವರು ವಿವರಿಸಿದರು ಈ ವೇಳೆ ಅಲ್ಲಿನ ಅಧಿಕಾರಿಗಳು ಈ ಬಗ್ಗೆ ತಹಶೀಲ್ದಾರ ಉತ್ತರ ನೀಡಲು ಹೇಳಿದಾಗ ಪಿಡಿಓ, ಗ್ರಾಮಕರಣಿಕರು ತಡಬಡಿಸಿದರು. ತಾಲೂಕು ಮಟ್ಟದ ಕೋವಿಡ್ ನಿಯಂತ್ರಿಸುವಲ್ಲಿ ತಾಲೂಕು ಆಡಳಿತ ಪೂರಕ ಮಾಹಿತಿಯೊಂದಿಗೆ ಕೃಷ್ಣ ಶೆಟ್ಟಿ ತಿಳಿಯಪಡಿಸಿದರು. ವಿವಿಧ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ , ಕೈಗೊಂಡ ಕ್ರಮಕಗಳ ಬಗ್ಗೆ ತಹಶೀಲ್ದಾರ ಅವರನ್ನು ಕೇಳಿದಾಗ ತಹಶೀಲ್ದಾರ ಅವರು ಅಸರ್ಮಪಕ ಉತ್ತರ ನೀಡಿದರು. ಇದಕ್ಕೆ ಪತ್ಯತ್ತರವಾಗಿ ಮಾತನಾಡಿದ ಕೃಷ್ಣ ಶೆಟ್ಟಿ ತಾಲೂಕು ಅಧಿಕಾರಿಯಾಗಿ ಉಡಾಫೆ ಉತ್ತರ ಬೇಡ, ಇಂತಹ ಸಂಧಿಘ್ನ ಸ್ಥಿತಿಯಲ್ಲಿ ಅಗತ್ಯ ಮುಂಜಾಗೃತ ಕ್ರಮಕೈಗೊಂಡು ಸೋಂಕು ನಿಯಂತ್ರಿಸಲು ಕ್ರಮಕೈಗೊಳ್ಳಿ ಎಂದರು. ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು ಎಂದರು. ಈ ಬಗ್ಗೆ ಮಾತನಾಡಿದ ಸಚಿವರು ವಾರದೊಳಗೆ ಎಲ್ಲಾ ಆಸ್ಪತ್ರೆಗಳ ವೈದ್ಯರನ್ನು ಅಗತ್ಯ ಅಧಿಕಾರಿಗಳ ಸಭೆ ಅಯೋಜಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಸದ್ಯ ಕಡಬ ಮತ್ತು ಕೊಲ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆಯಿದೆ ಎಂದು ಕಡಬ ವೈದ್ಯಾಧಿಕಾರಿ ತಿಳಿಸಿದರು.
ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಸದಸ್ಯೆ ಕುಸುಮಾ ಪಿ ವೈ, ಕಡಬ ಉಪತಹಶೀಲ್ದಾರ ಮನೋಹರ್ ಕೆ ಟಿ, ಕಡಬ ಪಟ್ಟಣ ಪಂಚಾಯಿತಿ ಅಧಿಕಾರಿ ಅರುಣ್ ಕುಮಾರ್, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ ಮೊದಲಾದವರು ಇದ್ದರು.
ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಸೊಂಕಿತ ಮಹಿಳೆಯೋರ್ವರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿದ್ದಾರೆ ಎಂದು ಸಭೆಯಲ್ಲಿ ವ್ಯಕ್ತವಾದ ಆರೋಪಕಕ್ಕೆ ಗ್ರಾಮ ಕರಣಿಕ ಹಾಗೂ ಗ್ರಾ.ಪಂ ಕಾರ್ಯದರ್ಶಿಯನ್ನು ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಸಿಗದೆ ಇದ್ದಾಗ ಸಚಿವರು ತರಾಟೆಗೆತ್ತಿಕೊಂಡರು.