ಸೋಂಕಿತರು ಶಬರಿಮಲೆಗೆ ಬರದಂತೆ ಮನವಿ

ತಿರುವನಂತಪುರಂ, ನ ೧೦- ಕೋವಿಡ್ -೧೯ ಸೋಂಕಿಗೊಳಗಾಗಿ, ಚೇತರಿಸಿಕೊಂಡವರು ಶಬರಿಮಲೆ ಪ್ರವೇಶಿಸದಂತೆ ಕೇರಳ ರಾಜ್ಯ ಸರ್ಕಾರ ಮನವಿ ಮಾಡಿ ಚೇತರಿಸಿಕೊಂಡವರಲ್ಲಿ ಮೂರು ವಾರಗಳಿಂದ ಮೂರು ತಿಂಗಳವರೆಗೆ ವೈರಸ್ ಪ್ರಭಾವ ಇರಲಿದೆ. ಹಾಗಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ. ಹೀಗಾಗಿ ದರ್ಶನಕ್ಕೆ ಬರುವುದು ಬೇಡ ಎಂದು ಮನವಿ ಮಾಡಿದೆ.

ಹಾಗಾಗಿ ಅಂತಹವರು ಶಬರಿಮಲೆ ಬೆಟ್ಟದ ಮೇಲೆ ಆಮ್ಲಜನಕ ಪ್ರಮಾಣ ಕಡಿಮೆ ಇರುವ ಕಾರಣ ತೊಂದರೆಗೆ ಸಿಲುಕುವ ಅಪಾಯವಿದೆ ಎಂದು ಎಚ್ಚರಿಸಿದೆ. ಪಲ್ಮನಾಲಜಿಸ್ಟ್(ಶ್ವಾಸಕೋಶ ತಜ್ಞರ) ಮಾರ್ಗದರ್ಶನದಲ್ಲಿ ದೈಹಿಕ ವ್ಯಾಯಾಮ ಮಾಡಿ, ಶ್ವಾಸ ಸಮಸ್ಯೆಗಳು ಇಲ್ಲ ಎಂದು ದೃಢಪಟ್ಟರೆ.. ಹೆಚ್ಚಿನ ಜಾಗೃತವಹಿಸಿ ಶಬರಿಮಲೆಗೆ ಬರಬಹುದು ಎಂದು ಹೇಳಿದೆ.
ಈ ತಿಂಗಳ ೧೬ ರಿಂದ ಮಂಡಲ ಪೂಜೆಗಳು ಪ್ರಾರಂಭವಾಗುವುದರೊಂದಿಗೆ .. ಡಿಸೆಂಬರ್ ಅಂತ್ಯದಿಂದ ಮಕರವಿಳಕ್ಕು ದರ್ಶನಗಳಿಗೆ ಅನುಮತಿಸಿರುವುದರಿಂದ .. ಶಬರಿಮಲೆ ಯಾತ್ರಿಕರಿಗಾಗಿ ಸೋಮವಾರ ಹಲವು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ, ಮುಖ್ಯವಾಗಿ ಭಕ್ತರು ಮುಖಗವುಸು ಧರಿಸಬೇಕು, ಭೌತಿಕ ಅಂತರ ಮತ್ತಿತರ ಕೋವಿಡ್ ಶಿಷ್ಠಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದೆ. ದರ್ಶನಕ್ಕೆ ೨೪ ಗಂಟೆಗಳ ಮೊದಲು ಯಾತ್ರಿಕರು ನೆಗೆಟಿವ್ ವರದಿ ಹೊಂದಿರಬೇಕು ಎಂದು ಹೇಳಿದೆ.

ಆದರೆ, ಕೊರೊನಾದಿಂದ ಚೇತರಿಸಿಕೊಂಡವರ ವಿಷಯದಲ್ಲಿ ಕೇರಳ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಕರೀಂ ನಗರಕ್ಕೆ ಸೇರಿದ ಪಾದಯಾತ್ರೆ ಗುರು ಸ್ವಾಮಿ ಗಡಪ ನಾಗರಾಜ್ ಹೇಳಿದ್ದಾರೆ. ಶಬರಿಪೀಠ ಯಿಂದ ನೀಲಮಲ, ಶರಣ ಗುತ್ತಿಯವರೆಗಿನ ಎತ್ತರದ ಪ್ರದೇಶದಲ್ಲಿ ಆಮ್ಲಜನಕ ಮಟ್ಟ ಕಡಿಮೆ ಇರಲಿದೆ. ಅಲ್ಲಿ ಆಕ್ಸಿಜನ್ ಕೇಂದ್ರಗಳಿದ್ದರೂ, ಪ್ರತಿ ವರ್ಷ ೨೫ ಮಂದಿ ಆಕ್ಸಿಜನ್ ದೊರೆಯದೆ.. ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.