ಸೋಂಕಿತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ

ಹನೂರು: ಮೇ.1- ಕೊರೊನಾ ಸೋಂಕಿತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಧೈರ್ಯವಾಗಿ ಇರಬೇಕೆಂದು ಗ್ರಾಮ ಲೆಕ್ಕಾಧಿಕಾರಿ ಮಾದೇಶ್ ಸಲಹೆ ನೀಡಿದರು.
ಹನೂರು ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದಲ್ಲಿ ಗ್ರಾಮದ ಯಜಮಾನರುಗಳು, ಕಂದಾಯ, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ. ಕಾರ್ಯಾಲಯದ ಸಹಯೋಗದೊಂದಿಗೆ ಕರೋನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕರೆಯಲಾಗಿದ್ದ ಸಭೆಯ ಬಳಿಕ ಸಂತ್ರಸ್ತರ ಮನೆಗಳಿಗೆ ತೆರಳಿ ಸಾಂತ್ವನ ತಿಳಿಸಿದರು.
ಕೊರೊನಾ ಎರಡನೇ ಅಲೆ ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗುವ ಭೀತಿ ಇದೆ ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪ್ರತಿಯೊಬ್ಬರು, ಮಾಸ್ಕ್ ಅಳವಡಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿ ಎಂದರು.
ಸಭೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರೆ ನಗರ ಪ್ರದೇಶಗಳಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂಕ್ವಾರಂಟೈನ್‍ನಲ್ಲಿ ಇರಬೇಕು. ಗ್ರಾಮಕ್ಕೆ ಬರುವ ಮುನ್ನ ಆಸ್ಪತ್ರೆಯಲ್ಲಿ ವೈದ್ಯರ ಧೃಢಿಕರಣ ಪತ್ರವನ್ನು ತರಬೇಕೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ಕೆ.ಮಹಾದೇವ, ವೆಂಕಟೇಶ್, ಮರಿಸ್ವಾಮಿ, ಆರ್.ಮಹದೇವ, ಕರಿಯಣ್ಣ, ಗ್ರಾ.ಪಂ.ಕಾರ್ಯದರ್ಶಿ ಗೋವಿಂದರಾಜು, ಆರೋಗ್ಯ ಇಲಾಖೆಯ ಎಂಎಲ್‍ಹೆಚ್‍ಒ ಭಾನುಪ್ರೀಯ, ಜಯಮ್ಮ, ಜಯರತ್ನ, ಯುವ ಮುಖಂಡರುಗಳಾದ ಮಾದೇಶ್, ಸುರೇಶ್, ಗ್ರಾಮಸ್ಥರು ಇದ್ದರು.