ಸೋಂಕಿತರು ಮಾನಸಿಕ ಒತ್ತಡದಿಂದ ಹೊರ ಬನ್ನಿ -ನಾಡಗೌಡ

ಸಿಂಧನೂರು.ಮೇ.೦೨-ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಟಾಗುತ್ತಿದ್ದು ಪಾಸಿಟಿವ್ ಬಂದ ನೂರು ಜನರಲ್ಲಿ ೫೦ ಜನರು ಕೊವಿಡ್ ಸೆಂಟರ್‌ಗೆ ಸೇರಿಸಲು ಇಲ್ಲಿ ತನಕ ಸಾಧ್ಯವಾಗಿಲ್ಲ ಇನ್ನು ಮುಂದಿನ ದಿನಗಳಲ್ಲಿ ಪೊಲೀಸರ ಮೂಲಕ ಸೊಂಕಿತರನ್ನು ಕೊವಿಡ್ ಸೆಂಟರ್ ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಜವಳಗೇರಾ ಗ್ರಾಮದಲ್ಲಿ ವೆಂಕಟರಾವ್ ನಾಡಗೌಡ ಫೌಂಡೇಶನ್ ವತಿಯಿಂದ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ೩೬ ಬೆಡ್‌ಗಳ ಕೊವಿಡ್ ಕೇರ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ಫೌಂಡೇಶನ್ ವತಿಯಿಂದ ಹಲವಾರು ಕೊರೊನಾ ಸಂಬಂಧಿಸಿದಂತೆ ಕೆಲಸ ಗಳನ್ನು ಮಾಡಿದ್ದು ಈಗ ಸೊಂಕಿತರಿಗಾಗಿ ಕೊವಿಡ್ ಸೆಂಟರ್ ಆರಂಭಿಸಲಾಗಿದ್ದು ಸಿಂಧನೂರು ನಗರ ಕೊವಿಡ್ ಸೆಂಟರ್ ಗೆ ಹೋಗುವ ಬದಲು ಜವಳಗೇರಾ ವ್ಯಾಪ್ತಿಯಲ್ಲಿ ಬರುವ ಸೊಂಕಿತರು ಗ್ರಾಮದ ಕೊವಿಡ್ ಸೆಂಟರ್ ಗೆ ದಾಖಲಾಗಿ ಇದರ ಸದುಪಯೋಗ ಪಡೆಕೊಳ್ಳಬೇಕು ಎಂದು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಪ್ರಥಮವಾಗಿ ಸೊಂಕಿತರಿಗೆ ಜವಳಗೇರಾ ಗ್ರಾಮದಲ್ಲಿ ಕೊವಿಡ್ ಸೆಂಟರ್ ಆರಂಭಿಸಿದ್ದು ಸೊಂಕಿತರಾಗಿ ಊಟ , ಕ್ಯಾರಂ ಬೋರ್ಡ ,ದಿನ ಪತ್ರಿಕೆ ಜೊತೆಗೆ ಯೋಗ ಮಾಡಿಸಲಾಗುತ್ತದೆ ಮಾನಸಿಕ ಒತ್ತಡ ಕಡಿಮೆಯಾಗಿ ಸೊಂಕಿತರು ಗುಣಮುಖರಾಗುತ್ತಾರೆ ಈ ಕೊವಿಡ್ ಸೆಂಟರ್ ಯಶಸ್ವಿ ಯಾದರೆ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ ಕೇಂದ್ರಗಳ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಫೌಂಡೇಶನ್ ವತಿಯಿಂದ ಕೊವಿಡ್ ಸೆಂಟರ್ ಆರಂಭಿಸುವ ಚಿಂತನೆ ಇದೆ ಎಂದರು.
ಇಲ್ಲಿತನಕ ಪರೀಕ್ಷೆ ಮಾಡಿಹಿಕೊಂಡು ಕೊವಿಡ್ ಸೆಂಟರ್ ಗೆ ದಾಖಲಾದ ಯಾವ ರೋಗಿವು ಸತ್ತಿಲ್ಲ ಪರೀಕ್ಷೆ ಮಾಡಿಸಿಕೊಳ್ಳದೆ ಕೊವಿಡ್ ಸೆಂಟರ್ ಗೆ ದಾಖಲಾಗದೆ ಮನೆಯಲ್ಲಿ ಇದ್ದವರು ಶೇ.೭೦ % ಜನ ಮರಣಯೊಂದಿದ್ದಾರೆಂದು ಆಸ್ಪತ್ರೆ ಮೂಲಗಳು ದೃಡಪಡಿಸಿವೆ ೩,೮೬೬ ಸೊಂಕಿತರಿದ್ದು ಅದರಲ್ಲಿ ೩೭ ಜನ ಗರ್ಭಿಣಿಯರು ೨೩,೨೨೩ ಜನರಿಗೆ ಪರೀಕ್ಷೆ ಮಾಡಿಸಲಾಗಿದ್ದು ಕವಾಶಕಿ ಕಾಯಿಲೆ ೬ ಜನ ಮಕ್ಕಳಿಗೆ ಬಂದಿದ್ದು ಇದಯ ಬಗ್ಗೆ ಗಮನ ಹರಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವದಾಗಿ ತಿಳಿಸಿದರು.
ಜೆ.ಡಿ.ಎಸ್ ಮುಂಖಡರಾದ ಬಸವರಾಜ್ ನಾಡಗೌಡ, ಬಿ.ಶ್ರೀ ಹರ್ಷ ,ವೆಂಕಟೇಶ್ ನಂಜಲದಿನ್ನಿ ,ಲಿಂಗರಾಜ್ ಹುಗಾರ್,ಡಾ.ಅಯ್ಯನಗೌಡ ,ಡಾ.ಸುಂಕದ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.