ಸೋಂಕಿತರಿಗೆ 150ಕ್ಕೂ ಹೆಚ್ಚು ಸಾಮಾಥ್ರ್ಯವುಳ್ಳ ಹಾಸಿಗೆ ವ್ಯವಸ್ಥೆ

ಹನೂರು:ಮೇ.30: ಕೊವೀಡ್ ಸೋಂಕಿತರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಏಕಲವ್ಯ ಶಾಲೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಸುಮಾರು 150 ಕ್ಕೂ ಹೆಚ್ಚು ಸಾಮಾಥ್ರ್ಯವುಳ್ಳ ಹಾಸಿಗೆ ವ್ಯವಸ್ಥೆ ಮತ್ತು ಮೂಲ ಭೂತ ಸೌಕರ್ಯವನ್ನು ಒದಗಿಸಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಹನೂರು ತಾಲ್ಲೂಕಿನ ಮಂಗಲ ಸಮೀಪದ ಏಕಲವ್ಯ ಶಾಲೆಗೆ ಬೇಟಿ ನೀಡಿ ಸೋಂಕಿತರಿಗೆ ಬೇಕಾಗುವ ಹಾಸಿಗೆ ವ್ಯವಸ್ಥೆ ಸೇರಿದಂತೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಡನೆ ಮಾತನಾಡಿದ ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಗಾಗಲೇ ಹಾಸಿಗೆಗಳು ಭರ್ತಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಸೋಂಕಿತರು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಏಕಲವ್ಯ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಇಂದಿನಿಂದಲೇ ಸೋಂಕಿತರನ್ನು ಈ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡಲಾಗುವುದುಎಂದ ಅವರು ನಮ್ಮ ತಾಲ್ಲೂಕಿನಲ್ಲಿ ಈಗಾಗಲೇ 700ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ.ಈ ಪೈಕಿ ಐದಾರು ಮಂದಿ ಮಾತ್ರ ಕೊಳ್ಳೇಗಾಲ ಹಾಗೂ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹುತೇಕ ಸೋಂಕಿ ತರು ಹನೂರು ಮೊರಾರ್ಜಿಕೊವೀಡ್ ಸೆಂಟರ್‍ನಲ್ಲಿ ಗುಣಮುಖರಾಗಿ ಮನೆಗೆ ತೆರಳಿರುವುದು ಸಮಾಧಾನಕರ ಸಂಗತಿಯಾಗಿದೆ. ಈ ಹಿಂದೆ ಸೋಂಕಿತರು ಕೋವಿಡ್ ಸೆಂಟರ್‍ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಮನೆಯಲ್ಲಿಯೇ ಇದ್ದು ಖಾಸಗಿ ಮೆಡಿಕಲ್ಸ್‍ಗಳಲ್ಲಿ ಔಷಧಗಳನ್ನು ಪಡೆದುಸೋಂಕು ಉಲ್ಭಣಗೊಂಡ ನಂತರ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದರಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡು ಕಡ್ಡಾಯವಾಗಿಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದುಕಟ್ಟುನಿಟ್ಟಿನಕ್ರಮ ಕೈಗೊಂಡಕಾರಣ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಹೆದರದೇ ವೈದ್ಯರನ್ನು ಸಂಪರ್ಕಿಸಿ ಒಂದು ವೇಳೆ ಪಾಸಿಟಿವ್ ಆದರೆ ಹೋಂ ಕ್ವಾರಂಟೈನ್ ಬದಲುಕೋವಿಡ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯಿರಿ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಹೆಚ್.ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ಕೋವಿಡ್ ಕೇಂದ್ರದ ವೈದ್ಯರಾದಗಿರೀಶ್. ಪ.ಪಂ.ಉಪಾಧ್ಯಕ್ಷ ಹರೀಶ್‍ಕುಮಾರ್, ಗಿರೀಶ್, ಸೋಮಶೇಖರ್, ಸುದೇಶ್ ಇನ್ನಿತರರು ಇದ್ದರು.