ಸೋಂಕಿತರಿಗೆ ಹಣ್ಣು ಹಂಪಲು ಮೆಡಿಕಲ್ ಕಿಟ್ ವಿತರಣೆ

ಹನೂರು:ಮೇ:05: ಕ್ಷೇತ್ರ ವ್ಯಾಪ್ತಿಯ ಹಲವಾರು ಜನರು ಕೊರೊನಾ ಮಹಾಮಾರಿ ಸೋಂಕಿಗೆ ಒಳಗಾಗಿದ್ದು ಅದರಲ್ಲಿ 90ರಷ್ಟು ಜನರು ಹೋಮ್ ಐಸೋಲೇಷ್‍ನಲ್ಲಿದ್ದಾರೆ ಎಂದು ಜನಾಶ್ರಯ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮಲೈಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‍ಗೆ ಸೋಂಕಿಗೆ ಒಳಾಗಗಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರ ಮನೆಗಳಿಗೆ ತೆರಳಿ ಹಣ್ಣು ಹಂಪಲು ಮತ್ತು ಮೆಡಿಕಲ್ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಕ್ಷೇತ್ರದ ಎಲ್ಲ ಕಡೆಯೂ ಕೊರೊನಾ ಮಹಾಮಾರಿ ಸೋಂಕಿಗೆ ಜನರು ಒಳಗಾಗುತ್ತಿರುವುದು ದುಃಖಕರ ವಿಚಾರ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಹಿತಕ್ಕಾಗಿ ಕೊರೊನಾ ಸೋಂಕಿತರ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ ನಮ್ಮ ಕೈಲಾದ ಸಹಾಯವನ್ನು ನೀಡಲಾಗುತ್ತದೆ. ಅಗತ್ಯ ಇರುವ ಮೆಡಿಕಲ್ ಕಿಟ್‍ನ ಜೊತೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ನೀಡಿ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಹಣ್ಣುಗಳನ್ನು ಹಂಚಲಾಯಿತು ಹಾಗೂ ಅವರಿಗೆ ಧೈರ್ಯದ ಮಾತು ಹೇಳಿ ಭರವಸೆ ನೀಡಲಾಗುತ್ತಿದೆ ಎಂದರು.
ಲೋಕೇಶ್ ಜಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇನ್ನಿತರರು ಇದ್ದರು.