ಸೋಂಕಿತರಿಗೆ ಸ್ಯಾನಿಟೇಜರ್-ಮಾಸ್ಕ್ ವಿತರಣೆ

 ಚನ್ನಗಿರಿ.ಮೇ.೨೯; ತಾಲ್ಲೂಕಿನಲ್ಲಿ ಜನರು ಕೋವಿಡ್ ನಿಯಮವನ್ನು ಪಾಲನೆ ಮಾಡದ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು ಜನರ ಸಹಕಾರ ನೀಡಬೇಕಾಗಿದೆ ಎಂದು ಶಾಸಕ ಮಾಡಳ್ ವಿರೂಪಾಕ್ಷಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಸೋಂಕು ನಿಯಂತ್ರಣ ಮಾಡುವಲ್ಲಿ ಸಾಕಾಷ್ಟು ಬಿಗಿ ಕ್ರಮ ಕೈಗೊಂಡರು ಜನರು ಸಹಕಾರ ನಿಡುತ್ತಿಲ್ಲ ಅದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.  ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ, ಜೊತೆಗೆ ನಾನು ಸ್ವಂತ ಹಣದಿಂದ ಮಧ್ಯಾಹ್ನದ ಊಟಕ್ಕೆ ಪ್ರತಿದಿನ ಲಾಡು, ಪಾಯಿಸಾ, ಹೋಳಿಗೆ ಊಟ, ಮೊಟ್ಟೆ, ಮಾವಿನಹಣ್ಣು, ಸೇರಿದಂತೆ ಪ್ರತಿ ದಿನ ಒಂದು ತರಹದ ರುಚಿಕರವಾದಂತಹ ಆಹಾರವನ್ನು ನನ್ನ ಸ್ವಂತ ಹಣದಿಂದ ಕೊಡಲಾಗುವುದು ಸಂಜೆ ವೇಳೆಗೆ ಬ್ರೆಡ್,ಟೀ ಸೇರಿದಂತೆ ಹಲವು ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಅದ್ದರಿಂದ ಜನರು ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ರೋಗದ ಲಿಂಕ್‌ನ್ನು ಕತ್ತರಿಸುವ ಕೆಲಸಕ್ಕೆ ಕೈ ಜೋಡಿಸಬೇಕಾಗಿದೆ ಹಾಗೂ ಸೋಂಕಿತರು ದಯಮಾಡಿ ಕೋವಿಡ್ ಸೆಂಟರ್‌ಗಳಿಗೆ ಬಂದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗಿ ವಿನಂತಿ ಮಾಡಿಕೊಂಡರು.  ಈ ವೇಳೆ ಆರೋಗ್ಯಧಿಕಾರಿ ಪ್ರಭು, ಸಿ.ಪಿ.ಐ ಮಧು, ಡಾ.ಅಶೋಕ್, ಪ್ರಕಾಶ್, ಬಸವರಾಜ್, ತಹಶೀಲ್ದಾರ್ ಅರುಣ್ ಕುಮಾರ್, ಲಕ್ಷಿö್ಮದೇವಮ್ಮ, ಗೋಪಿ ಇದ್ದರು.