ಸೋಂಕಿತರಿಗೆ ಸೌಲಭ್ಯ ಕೊರತೆ ಆಸ್ಪತ್ರೆಗೆ ಭೇಟಿ ನೀಡಿದ ಪುರಸಭೆ ಅಧ್ಯಕ್ಷೆ

ಮುದ್ದೇಬಿಹಾಳ:ಎ.26: ಪಟ್ಟಣದ ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸಲ್ಲ ಸಮಯಕ್ಕೆ ಸರಿಯಾಗಿ ಊಟ ಉಪಹಾರ ನೀಡುತ್ತಿಲ್ಲ ಎಂಬುದು ಸೇರೆದಂತೆ ಹಲವು ರೀತಿಯ ತೊಂದರೆ ಅನೂವಿಸುತ್ತಿದ್ದಾರೆ ಎನ್ನುವ ಮಾಹಿತಿ ಆದಾರದ ಮೇಲೆ ಶನಿವಾರ ಪುರಸಭೆ ಅಧ್ಯಕ್ಷೇ ಪ್ರತಿಭಾ ಅಂಗಡಗೇರಿ ಅವರು ಆಸ್ಪತ್ರೆಗೆ ಬೇಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಈ ವೇಳೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲೆಡೆ ಕೋವಿಡ್ ಸೋಂಕಿತರ ಸಂಖ್ಯೆ ದಿನದಿನಕ್ಕೆ ಏಕರಿಕೆಯಾಗುತ್ತಿದೆ. ಈ ಹಿನ್ನೇಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸರಕಾರ ಕೋವಿಡ್ ನಿಯಂತ್ರಣಕ್ಕೆ ಯಾವೂದೇ ರೀತಿಯ ಮೂಲಬೂತ ಸೌಲಭ್ಯ ಒದಗಿಸಲ್ಲ.

ಇದರಲ್ಲಿ ಸರಕಾರದ ವೈಫಲ್ಯ ಎದ್ದುಕಾಣುತ್ತಿದೆ. ಅದರಂತೆ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿಯಂತೂ ಹೇಳತೀರದ ಸಮಸ್ಯೆಗಳ ಸಿಲುಕಿ ರೋಗಿಗಳಿಗೆ ಸಮರ್ಪಕವಾದ ಯೋಗ್ಯ ಚಿಕಿತ್ಸೇ ದೊರಕದೇ ತೊಂದರೆ ಅನುಭವಿಸುವಂತಾಗಿದೆ.

ಅದರಂತೆ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಹೋರ ಹಾಗೂ ಒಳ ರೋಗಿಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾಗಿ ಆಹಾರ ಪೂರೈಸುತ್ತಿಲ್ಲ. ಮೊದಲೇ ಕೋವಿಡ್ ಸೊಂಕಿತರಿಗೆ ಸಮಯಕ್ಕೆ ಸರಿಯಾಗಿ ಆಹಾರ ವಿತರಸಬೇಕು ಜತೆಗೆ ಅಗತ್ಯ ವೈದೈಕೀಯ ಚಿಕಿತ್ಸೆ ನೀಡಬೇಕು ಎಂದು ಸರಕಾರವೇ ಹೇಳುತ್ತದೇ. ಆದರೇ ಇಲ್ಲಿ ಅದ್ಯಾವೂದು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಜತೆಗೆ ಪುರಸಭಭೆ ಸದಸ್ಯರಾದ ಮೈಬೂಬ ಗೊಳಸಂಗಿ, ವಿರೇಶ ಹಡಲಗೇರಿ ಅವರು ಮಾತನಾಡಿ ಇಲ್ಲಿನ ಸರಕಾರಿ ಆಸ್ಪತ್ರೆಯ ಕೋವಿಡ್ ಸೇಂಟೆರ್ ಕೋಠಡಿಗಳಲ್ಲಿ ಸೇವೆ ಸಲ್ಲಸುತ್ತಿರುವ ಯಾವ ವೈದೈರು, ಸಹಾಕರಿಗೂ ಪಿಪಿಇ ಕಿಇಟ್ಟ ಧರಸಿಲ್ಲ, ಮಾಸ್ಕ್ ಗಳಿಲ್ಲ ಸ್ಯಾನಿಟೈಜರ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಇಂತಹ ಸಂದರ್ಭದಲ್ಲೂ ರಾಜ್ಯ ಸರಕಾರ ರಾಜಕಾರಣ ಮಾಡುವುದು ಮೋಜು ಮಸ್ತಿ ಮಾಡುವುದನ್ನು ಬಿಟ್ಟು ಸಾಮಾನ್ಯ ಜನರು ಜೀವ ಉಳಿಸುವಲ್ಲಿ ಪ್ರಯತ್ನಿಸಲಿ ಎಲ್ಲ ಬಗೆಯ ಸೌಭ್ಯಗಳನ್ನು ನೀಡಲಿ ಎಂದರು.