ಸೋಂಕಿತರಿಗೆ ಶಾಹಿನ್ ಕಾಲೇಜಿನಿಂದ ಉಚಿತ ಆಹಾರ ವ್ಯವಸ್ಥೆ

ಬೀದರ:ಎ.27: ಕೋವಿಡ್ ಕಾರಣ ಕ್ವಾರಂಟೈನ್ ಆದವರಿಗೆ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ಆಹಾರ ನೀಡಲು ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆ ಮುಂದಾಗಿದೆ.

‘ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಅವರ ಮನೆ ಬಾಗಿಲಿಗೆ ಪೂರೈಸಲಿದ್ದೇವೆ. ಮಧ್ಯಾಹ್ನದ ಊಟ ಬೇಕಾದವರು ಬೆಳಿಗ್ಗೆ 10 ಗಂಟೆ ಹಾಗೂ ರಾತ್ರಿ ಊಟ ಬೇಕಾದವರು ಸಂಜೆ 4 ಗಂಟೆಯ ಒಳಗೆ ಮೊಬೈಲ್ ಸಂಖ್ಯೆ 8970973758 ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದ್ದಾರೆ.