ಸೋಂಕಿತರಿಗೆ ರೆಮಿಡಿಸಿವಿರ್ ಕೈಬಿಡಲು ಚಿಂತನೆ

ನವದೆಹಲಿ, ಮೇ ೧೯-ಕೊರೊನಾ ಸೋಂಕಿತರಿಗೆ ರೆಮಿಡಿಸಿವಿರ್ ಚುಚ್ಚುಮದ್ದನ್ನು ಶೀಘ್ರದಲ್ಲೇ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಣಾ ಈ ಕುರಿತು ಸುಳಿವು ನೀಡಿದ್ದಾರೆ.
ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವುದನ್ನು ಕೈಬಿಡುವಂತೆ ಶಿಫಾರಸ್ಸು ಮಾಡಿದ ಬೆನ್ನಲ್ಲೆ ಈಗ ರೆಮಿಡಿಸಿವಿರ್‌ನ್ನು ಕೈಬಿಡಲು ತಜ್ಞರು ಮುಂದಾಗಿದ್ದಾರೆ.
ರೆಮಿಡಿಸಿವಿರ್ ಚುಚ್ಚುಮದ್ದನ್ನು ಸೋಂಕಿತರಿಗೆ ನೀಡಿದರೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲು ಚಿಂತನೆ ನಡೆಸಲಾಗಿದೆ ಎಂದರು.
ಪ್ಲಾಸ್ಲಾ ಚಿಕಿತ್ಸೆಯಲ್ಲಿ ಸೋಂಕಿಗೆ ಒಳಗಾದವರಿಗೆ ನಾವು ಮೊದಲೇ ತೆಗೆದುಕೊಂಡಿದ್ದ ಪ್ರತಿಕಾಯವನ್ನು ನೀಡುತ್ತೇವೆ. ಇದರಿಂದಾಗಿ ಪ್ರತಿಕಾಯವು ಸೋಂಕಿನ ಜತೆ ಹೋರಾಟ ನಡೆಸುತ್ತದೆ. ಕೊರೊನ ದಾಳಿ ಮಾಡಿದಾಗ ಸಾಮಾನ್ಯವಾಗಿ ಪ್ರತಿಕಾಯವು ರೂಪುಗೊಳ್ಳುತ್ತದೆ. ಪ್ಲಾಸ್ಲಾ ನೀಡುವುದರಿಂ ರೋಗಿಯ ಮತ್ತು ಇತರ ಜನರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಪ್ಲಾಸ್ಲಾ ಸುಲಭವಾಗಿ ದೊರೆಯುವುದಿಲ್ಲ. ಈ ಹಿಂದೆ ವೈಜ್ಞಾನಿಕ ಆಧಾರದ ಮೇಲೆ ಪ್ರಾರಂಭಿಸಲಾಗಿತ್ತು. ಈಗ ಇದೇ ಆಧಾರದ ಮೇಲೆಯೇ ಪ್ಲಾಸ್ಲಾ ಚಿಕಿತ್ಸೆಯನ್ನು ನಿಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ಲಾಸ್ಮಾ ಚಿಕಿತ್ಸೆಯನ್ನು ತೆಗೆದುಹಾಕಲಾಗಿದೆ. ಆದರೆ ಇದು ಕ್ಲಿನಿಕಲ್ ಹೆಜ್ಜೆಯಾಗಿದ್ದು, ಆಮ್ಲಜನಕ ಶುದ್ಧತೆ ಕಡಿಮೆ ಇರುವ ಸಂದರ್ಭಗಳಲ್ಲಿ ಪ್ಲಾಸ್ಮಾ ಬಳಕೆಯಿಂದ ರೋಗಿಗೆ ಆಮ್ಲಜನಕದ ಮಟ್ಟವನ್ನು ಸ್ಥಿರಗೊಳಿಸಲು ಅಥವಾ ಕಡಿಮೆ ಆಮ್ಲಜನಕ ಬೇಕಾಗಬಹುದು ಎಂದು ಭಾರತೀಯ ವೈದ್ಯಕೀಯ ಸಂಸ್ಥೇಯ ಮೂತ್ರ ಶಾಸ್ತ್ರಜ್ಞ ಹಾಗೂ ಹಣಕಾಸು ಕಾರ್ಯದರ್ಶಿ ಡಾ. ಅನಿಲ್ ಗೋಯಲ್ ಹೇಳಿದರು.