ಸೋಂಕಿತರಿಗೆ ಮಿರ್ಚಿ ಮಂಡಕ್ಕಿ ವಿತರಿಸಿದ ಜಿ.ಪಂ ಸದಸ್ಯ

ದಾವಣಗೆರೆ: ಜೂ.೯; ಜಿಲ್ಲೆಯಲ್ಲಿ ಕೊರೋನ ವಾರಿಯರ್ ನಂತೆ  ಜಿಪಂ ಸದಸ್ಯರಾದ ಕೆಎಸ್ ಬಸವಂತಪ್ಪ ಅವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕೊರೋನ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತ ದಾವಣಗೆರೆಯ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿ ತಾವೆ ಹಾಡನ್ನು ಹಾಡಿ ಕೊರೋನ ಸೊಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು  ಮಾಡುತ್ತಿದ್ದಾರೆ.ಜಿಪಂ ಸದಸ್ಯರಾದ ಬಸವಂತಪ್ಪ  ನಗರದ  ತರಳಬಾಳು ಕೋವಿಡ್ ಕೇರ್ ಸೆಂಟರ್ ಮತ್ತು ಬಾಡಕ್ರಾಸ್ ಬಳಿಯ ಕೋವಿಡ್ ಕೇರ್ ಸೆಂಟರ್,ಜೆಹೆಚ್ ಪಟೇಲ್ ನಗರದ ಕೋವಿಡ್ ಕೇರ್ ಸೆಂಟರ್ ಗಳಿಗೆ  ತೆರಳಿ ಕೊರೋನ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಾ ದಾವಣಗೆರೆಯ ಮಿರ್ಚಿ ಮಂಡಕ್ಕಿಯನ್ನು ವಿತರಣೆ ಮಾಡಿಸರು. ಕೊರೋನ ಸೋಂಕಿತರು ಮಾತ್ರೆಗಳನ್ನು ಸೇವಿಸಿ ಅವರ ಬಾಯಿ ಜಿಡ್ಡು ಹಿಡಿದಿರುತ್ತೆ ಹೀಗಾಗಿ  ನನ್ನ ಸೋಂಕಿತ ಬಂಧುಗಳಿಗೆ ಮಿರ್ಚಿ ಮಂಡಕ್ಕಿಯನ್ನು ನೀಡಿದ್ದೇನೆ ಎಂದು ಜಿಪಂ ಸದಸ್ಯರಾದ ಬಸವಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕೊರೋನದಂತಹ ಸಂದರ್ಭದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ ಅವರ ನೆರವಿಗೆ ನಾವು ನಿಲ್ಲಬೇಕಿದೆ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕಿದೆ ಎಂದರು. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಕಡಿಮೆಯಾಗುತ್ತಿವೆ , ಜನರು ಕೊರೋನದ ಬಗ್ಗೆ ಜಾಗೃತರಾಗಿರಬೇಕು ಎಂದು ಸಾರ್ವಜನಿಕರಿಗೆ ಕೊರೋನದ ಬಗ್ಗೆ ಜಾಗೃತಿ ಮೂಡಿಸಿದರು.