ಸೋಂಕಿತರಿಗೆ ಬೆಳಗಿನ ಉಪಹಾರ ನೀಡಿದ ಶಾಸಕರು

ಹೊನ್ನಾಳಿ.ಮೇ.೧೬; ಸಾರ್ವಜನಿಕ  ಆಸ್ಪತ್ರೆಯಲ್ಲಿ ಸೋಂಕಿತರಿಗೆ ಬೆಳಗಿನ ಉಪಹಾರವಾಗಿ ಇಡ್ಲಿ ಸಾಂಬಾರ್ ಚಟ್ನಿ  ಕೊಡುವ ಮೂಲಕ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ  ರೋಗಿಗಳಿಗೆ ಧೈರ್ಯದಿಂದ ಇರಲು ಹೇಳಿದರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಯಾವುದೇ ಕಾರಣಕ್ಕೂ ಆಕ್ಸಿಜನ್ ಆಗಲಿ ವೈದ್ಯರು ನಿಮ್ಮನ್ನು ತಕ್ಷಣಕ್ಕೆ ಕಂಡು ಉಪಚರಿಸಿ ಚಿಕಿತ್ಸೆ ಕೊಡುತ್ತಾರೆ ಯಾವುದೇ ಕಾರಣಕ್ಕೂ ನೀವು ಶೀತ ಕೆಮ್ಮು ನೆಗಡಿ ಎಂದು ಮನೆಯಲ್ಲೇ ಕೂತು ಕೊಳ್ಳಬೇಡಿ ಸೋಂಕು ಸಣ್ಣ ಪ್ರಮಾಣದಲ್ಲಿ ಇರುವಾಗಲೇ ವೈದ್ಯರನ್ನು ಕಾಣಬೇಕು.  ವೈದ್ಯರ ಸಲಹೆಯನ್ನು ತೆಗೆದುಕೊಂಡು ಆಸ್ಪತ್ರೆಗೆ ದಾಖಲಾಗಿ ಮತ್ತು ಕೊರೋನಾ ಟೆಸ್ಟ್ ಮಾಡಿಸಿಕೊಂಡು ಆರೋಗ್ಯವಂತರಾಗಿ ಇರಬೇಕೆಂದು ತಿಳಿಸಿದರು.ಜನರ ಆರೋಗ್ಯ ಅತಿಮುಖ್ಯ ನನಗೆ ಯಾವುದೇ ರಾಜಕೀಯ ದುರುದ್ದೇಶದಿಂದ ಯಾವ ಕೆಲಸವನ್ನು   ಮಾಡುವುದಿಲ್ಲ ನನ್ನ ಜನತೆಗೋಸ್ಕರ ನನ್ನ ಸೇವೆ ಯಾವುದೇ ಓಟಿಗಾಗಿ ಪ್ರಚಾರಕ್ಕಾಗಿ ನಾನು ಈ ಕೆಲಸ ಮಾಡುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ರೇಣುಕಾಚಾರ್ಯ  ಹಾಗೂ  ಶಾಸಕರ ಆಪ್ತ ವಲಯದ  ಶಿವು ಹುಡೇದ್  ಮತ್ತು ಪ್ರವೀಣ್. ಸಿದ್ದು. ಪುರಸಭೆ ಅಧ್ಯಕ್ಷ ಕೆ ವಿ ಶ್ರೀಧರ್. ಪುರಸಭೆ ಸದಸ್ಯ ರಂಗಪ್ಪ  ಮುಂತಾದವರಿದ್ದರು.