ಸೋಂಕಿತರಿಗೆ ಪೋಲಿಸ್‌ರಿಗೆ ಊಟದ ಪಾಕೇಟ್ ವಿತರಣೆ

ರಾಯಚೂರು.ಮೇ.೨೯-ನಗರದ ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಡಾ.ಶಿವರಾಜ್ ಪಾಟೀಲ್ ಅಭಿಮಾನಿ ಬಳಗ ಹಾಗೂ ವಾರ್ಡ್ ನಂ ೩೪ ಅಸ್ಕಿಹಾಳ ಘಟಕದ ವತಿಯಿಂದ ಕೋವಿಡ ರೋಗಿಗಳಿಗೆ, ರೋಗಿಗಳೊಡನೆ ಬಂದಂತ ಕುಟುಂಬ ಸದಸ್ಯರಿಗೆ, ಬಡವರಿಗೆ ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರಿಗೆ ಊಟದ ಪಾಕೇಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ, ವೈ.ಗೋಪಾಲ್ ರೆಡ್ಡಿ, ಪ್ರಾಧಿಕಾರದ, ಸದಸ್ಯರುಗಳಾದ ಎ. ಚಂದ್ರ ಶೇಖರ್, ಶೇಖರ್ ವಾರದ, ಮಂಜುನಾಥ ಪಾಟೀಲ್ ಎಕ್ಲಾಸ್ ಪೂರು, ಗಿರೀಶ ವಕೀಲರು, ಅಸ್ಕಿಹಾಳ್ ಎಸ್.ರಾಮು ವಕೀಲರು, ಅಸ್ಕಿಹಾಳ್ ಹಾಗೂ ಪಂಪನಗೌಡ ಮಂದಕಲ್ ಉಪಸ್ಥಿತರಿದ್ದರು.