ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ದದ್ದಲ್

ರಾಯಚೂರು.ಜೂ.೦೨-ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ರಾಯಚೂರ ತಾಲೂಕ ವ್ಯಾಪ್ತಿಯ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿದರು.
ಕೋವಿಡ್ ಸೆಂಟರ್‌ನಲ್ಲಿ ಹಾರೈಕೆ ಪಡೆಯುತ್ತಿರುವ ಸೋಂಕಿತರನ್ನು ಭೇಟಿ ಮಾಡಿ ಎಲ್ಲಾರಿಗೂ ಹಣ್ಣು, ಬಿಸ್ಕೀಟ್ ಮತ್ತು ಡ್ರೈಪ್ರುಟ್ಸ್ ವಿತರಿಸಿ ಅವರ ಆರೋಗ್ಯವನ್ನು ವಿಚಾರಿಸಿದರು ಮತ್ತು ಕೊವಿಡ್ ಬಗ್ಗೆ ಭಯ ಬಿಟ್ಟು ಧೈರ್ಯದಿಂದ ಇರುವಂತೆ, ಹಾಗೂ ಯಾವುದೇ ನಿರ್ಲಕ್ಷ್ಯ ವಹಿಸದೆ ಜಾಗೃತರಾಗಿರುವಂತೆ ತಿಳಿಸಿದರು.
ಮತ್ತು ಯಾವುದೇ ಸಮಸ್ಯಗಳು ಉಂಟಾದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳಿಗೆ ಮತ್ತು ನಮಗೆ ದೂರವಾಣಿ ಮುಖಾಂತರ ಸಂಪರ್ಕಿಸಲು ತಿಳಿಸಿದರು.
ಕೊವಿಡ್ ಸೊಂಕಿತರಿಗೆ ಯಾವುದೇ ಲಕ್ಷಣಗಳು ಕಂಡುಬಂದರೆ ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ.ಶಾಕಿರ್, ವೈದ್ಯಧಿಕಾರಿಗಳು ನರ್ಸ್‌ಗಳು, ಶ್ರೀನಿವಾಸ ಗ್ಯಾಸ್, ಜಾವೀದ್ ಪಟೇಲ್ ಇಡಪನೂರ, ಇನ್ನಿತರರು ಉಪಸ್ಥಿತರಿದ್ದರು.