ಸೋಂಕಿತರಿಗೆ ತ್ವರಿತ ಆಕ್ಸಿಜನ್: ಬಳ್ಳಾರಿ

ಬ್ಯಾಡಗಿ,ಜೂ11: ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಅಭಾವ ನೀಗಿಸಲು ಸರ್ಕಾರವು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಭಾಗಿತ್ವದೊಂದಿಗೆ ಬಸ್‍ಗಳಿಗೆ ಆಕ್ಸಿಜನ್ ಅಳವಡಿಸಿ ಆಕ್ಸಿಜನ್ ಬಸ್‍ಗಳಾಗಿ ಮಾರ್ಪಾಟು ಮಾಡಿ ಆಸ್ಪತ್ರೆಯ ಮುಂಭಾಗಗಳಲ್ಲಿ ಅವಶ್ಯಕ ಇರುವ ಸೋಂಕಿತರಿಗೆ ಆಕ್ಸಿಜನ್ ನೀಡುವ ಕಾರ್ಯ ತ್ವರಿತವಾಗಿ ಮಾಡುತ್ತಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನೂತನವಾಗಿ ಆಕ್ಸಿಜನ್ ಬಸ್ಸಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಬಾಧಿತರು ಆಕ್ಸಿಜನ್ ನೆರವು ಪಡೆಯಬಹುದಾಗಿದೆ. ಬಸ್’ನಲ್ಲಿ ಸೋಂಕಿತರಿಗೆ ಆಕ್ಸಿಜನ್ ಕೊಡುವ ಸೌಲಭ್ಯವಿದ್ದು, ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ಅಂಥವರನ್ನು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುವುದು. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಸೋಂಕಿತರಿಗೆ ಆಕ್ಸಿಜನ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವವನ್ನು ನೀಗಿಸಲು ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ನಾಯ್ಕ, ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಫಕ್ಕೀರಮ್ಮ ಚಲುವಾದಿ, ಬಸವರಾಜ ಹಾವನೂರ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪುಟ್ಟರಾಜ, ಪುರಸಭಾ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಘಟಕ ವ್ಯವಸ್ಥಾಪಕ ಆರ್.ಸಿ.ಪಾಟೀಲ, ಮುಖಂಡರಾದ ವೀರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಶೇಖರಗೌಡ ಗೌಡ್ರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.