ಸೋಂಕಿತರಿಗೆ ಆತ್ಮವಿಶ್ವಾಸ- ಧೈರ್ಯ ಮುಖ್ಯ

ಹರಿಹರ.ಜು 1;  ವೈರಸ್ ದೃಢಪಟ್ಟವರು ಹೆದರುವ ಅವಶ್ಯಕತೆಯಿಲ್ಲ ಧೈರ್ಯದಿಂದ ಚಿಕಿತ್ಸೆಯನ್ನು ಪಡೆದರೆ ಅತೀ ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಾ. ಡಿ ಚಂದ್ರ ಮೋಹನ್ ಹೇಳಿದರು. ಸಂಜೆವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು  ಎರಡನೇ ಹಂತದ ಅಲೆಯಿಂಂದ ಸಾಕಷ್ಟು ಜನರು ಮರಣಿಸಿದ್ದಾರೆ. ಸರ್ಕಾರ ಸಾಕಷ್ಟು ಜಾಗೃತಿ  ಮೂಡಿಸಿದರು  ನಾಗರಿಕರು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ವೈರಸ್ಸನ್ನು ನಿಯಂತ್ರಿಸಬೇಕಾದರೆ ಇಲಾಖೆಗಳಿಂದ ಮಾತ್ರ ಸಾಲದು ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಿ ಕೋವಿಡ್ 19 ಮಾರ್ಗ ಸೂಚಿಗಳನ್ನು ಪಾಲಿಸಿದರೆ ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯವಾಗುತ್ತದೆ ಎಂದರು ವೈರಸ್ ಪ್ರಾರಂಭ ದಿಂದಲೂ  ದೃಢ ಪಟ್ಟು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ವ್ಯಕ್ತಿಗಳು ಒಟ್ಟು 5498 ಇದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ  4909 ವ್ಯಕ್ತಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  589 ಸಕ್ರಿಯ ಪ್ರಕರಣಗಳು ಇವೆ  ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಖಾಸಗಿ ಆಸ್ಪತ್ರೆಯಲ್ಲಿ 31 ವೈರಸ್ ಪ್ರಕರಣಗಳು ಇದ್ದು  ನಗರ ಮತ್ತು ಗ್ರಾಮೀಣ ಪ್ರದೇಶಗಳಾದ ದೇವರ ಬೆಳಕೆರೆ. ಎಸ್ ಜೆ ವಿ ಪಿ ಕಾಲೇಜು ಕೊಂಡಜ್ಜಿ. ಗುತ್ತೂರು .ಸೇರಿದಂತೆ ಕೋವಿಡ್ 19 ಕೇರ್ ಕೇಂದ್ರಗಳಲ್ಲಿ 309 ವೈರಸ್ ಸೋಂಕಿತ ಧೃಡಪಟ್ಟ ವ್ಯಕ್ತಿಗಳು ಚಿಕಿತ್ಸೆ ಆರೈಕೆಯಲ್ಲಿ ಇದ್ದಾರೆ ಎಂದರು  ವೈರಸ್ ವ್ಯಕ್ತಿಗೆ ಬಂದ ತಕ್ಷಣ ಹೆದರದೆ  ಧೈರ್ಯದಿಂದ ಆತ್ಮ ವಿಶ್ವಾಸದಿಂದ ಅದನ್ನು ಎದುರಿಸಬೇಕು ಮೊದಲ ನಾವು ಮಾನಸಿಕವಾಗಿ ಸದೃಢವಾಗಬೇಕೆಂದರು.ವಾರಿಯರ್ಸ್ ಗಳೊಂದಿಗೆ ಕೈಜೋಡಿಸಿ ವೈರಸ್ಸನ್ನ ಮುಕ್ತ ಮಾಡುವುದಕ್ಕೆ ಮುಂದಾಗೋಣ ಎಂದರು